ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಬಹುನಿರೀಕ್ಷಿತ ಸಿನಿಮಾ ಸೈರಾ ನರಸಿಂಹರೆಡ್ಡಿ. ಟಾಲಿವುಡ್ ನಲ್ಲಿ ಮಾತ್ರವಲ್ಲದೇ ಸುದೀಪ್ ನಟನೆಯಿಂದಲೂ ಕನ್ನಡದಲ್ಲಿಯೂ ಕೌತುಕತೆಯನ್ನು ಸೃಷ್ಟಿಸಿದೆ. ಬರೋಬ್ಬರಿ ಎರಡು ವರ್ಷಗಳಿಂದಲೂ ಚಿತ್ರೀಕರಣವನ್ನು ಮಾಡಿದ್ದ ಸೈರಾ ನರಸಿಂಹ ರೆಡ್ಡಿ ಸದ್ಯ ಚಿತ್ರೀಕರಣವನ್ನು ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದೆ. ಇಂದು ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿರುವ ಚಿತ್ರತಂಡ ನಾಲ್ಕು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗುತ್ತಿರುವ ಕಾರಣದಿಂದ ಎಲ್ಲ ಇಂಡಸ್ಟ್ರಿಗಳ ದೊಡ್ಡ ನಟರಿಂದ ಡಬ್ಬಿಂಗ್ ಮಾಡಿಸಿದೆ. ತೆಲುಗಿನಲ್ಲಿ ಪವನ್ ಕಲ್ಯಾಣ್, ತಮಿಳಿನಲ್ಲಿ ರಜನಿಕಾಂತ್, ಮಲಯಾಳಂ ನಲ್ಲಿ ಮೋಹಲ್ ಲಾಲ್ ಧನಿ ನೀಡಿದ್ದ ಈ ಚಿತ್ರದ ಟೀಸರ್ ನ ಕನ್ನಡ ಅವತರಣಿಕೆಗೆ ರಾಕಿಂಗ್ ಸ್ಟಾರ್ ಯಶ್ ಡಬ್ ಮಾಡಿದ್ದಾರೆ.
ಮೆಗಾ ಸ್ಟಾರ್ನ ಮೆಗಾ ಮೂವಿ ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಬಿಗ್ಬಿ ಅಮಿತಾಭ್ ಬಚ್ಚನ್, ತಮಿಳು ನಟ ವಿಜಯ್ ಸೇತುಪತಿ, ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್, ಬಹುಭಾಷಾ ನಟಿ ನಯನತಾರಾ, ಜಗಪತಿ ಬಾಬು ನಟಿಸಿದ್ದಾರೆ. ರಾಮ್ ಚರಣ್ ತೇಜ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸುರೇಂದರ್ ರೆಡ್ಡಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ನಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ.
No Comment! Be the first one.