ಮೆಗಾಸ್ಟಾರ್ ಚಿರಂಜೀವಿ ನಟನೆಯ 151ನೇ ಸಿನಿಮಾ ಸೈರಾ ನರಸಿಂಹರೆಡ್ಡಿ. ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ನರಸಿಂಹರೆಡ್ಡಿ ಅವರ ಜೀವನಾಧಾರಿತ ಕಥೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಇತ್ತೀಚಿಗಷ್ಟೇ ಚಿತ್ರತಂಡ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಪ್ರೇಕ್ಷಕರಿಂದ ಭರಪೂರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿಯುವ ನರಸಿಂಹರೆಡ್ಡಿಯ ಪಾತ್ರ ನೋಡುಗರ ಮೈನವಿರೇಳಿಸುವಂತಿದೆ. ಕನ್ನಡದಲ್ಲಿಯೂ ‘ಸೈರಾ ನರಸಿಂಹರೆಡ್ಡಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಿನಿಮಾ ಕನ್ನಡಕ್ಕೂ ಡಬ್ಬಿಂಗ್ ಆಗುತ್ತಿರುವುದು ವಿಶೇಷವಾಗಿದೆ. ಟೀಸರ್ ನೋಡಿದ ಬೆನ್ನಲ್ಲೇ ನಟ ಸುದೀಪ್ ಸೈರಾ ಟೀಸರ್ ಗೆ ಟ್ವಿಟರ್ ನಲ್ಲಿ ಶುಭ ಕೋರಿದ್ದಾರೆ. ‘ರಾಮ್ಚರಣ್ ಮತ್ತು ಸುರೇಂದ್ರ ಅವರ ತಂಡದ ಶ್ರಮ ಶ್ಲಾಘನೀಯವಾದುದು. ಚಿರಂಜೀವಿ ಸರ್ ಅವರ ಲುಕ್ ಸೊಗಸಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
https://twitter.com/KicchaSudeep/status/1164037468519190528
ಈ ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸಿದ್ದು, ರಾಮ್ ಚರಣ್ ತೇಜ್ ತಮ್ಮ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಅಮಿತಾಭ್ ಬಚ್ಚನ್, ಸುದೀಪ್, ನಯನತಾರಾ, ತಮನ್ನಾ ಭಾಟಿಯಾ, ಸೇತುಪತಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಗಾಂಧಿಜಯಂತಿಯ ಪ್ರಯುಕ್ತ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಸಿನಿಮಾ ತೆರೆಕಾಣುತ್ತಿದೆ.
Comments