ಮೆಗಾಸ್ಟಾರ್ ಚಿರಂಜೀವಿಯವರ ಬಹುನಿರೀಕ್ಷಿತ ಸಿನಿಮಾ ಸೈರಾ ನರಸಿಂಹ ರೆಡ್ಡಿ. ಬಹುತೇಕ ಚಿತ್ರದ ಶೂಟಿಂಗ್ ಮುಗಿಯುವ ಹಂತದಲ್ಲಿದ್ದು, ಚಿರಂಜೀವಿ ಹುಟ್ಟುಹಬ್ಬದ ನಿಮಿತ್ತ ಆಗಸ್ಟ್ 22ರಂದು ಸೈರಾ ನರಸಿಂಹ ರೆಡ್ಡಿ ಚಿತ್ರದ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡವು ಪ್ಲ್ಯಾನ್ ಮಾಡಿಕೊಂಡಿದೆ. ಸದ್ಯದಲ್ಲೇ ಅದರ ಅಧಿಕೃತ ಘೋಷಣೆಯೂ ಆಗಲಿದೆ. ಈ ಸಿನಿಮಾವನ್ನು ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದು, ಕೊನಿಡೆಲಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಾಮ್ ಚರಣ್ ತೇಜ್ ಬಂಡವಾಳ ಹೂಡುತ್ತಿದ್ದಾರೆ.

ಇನ್ನು ಚಿರಂಜೀವಿಗೆ ಲೇಡಿ ಸೂಪರ್ ಸ್ಟಾರ್ ನಯನಾತಾರ ನಾಯಕಿಯಾಗಿ ನಟಿಸುತ್ತಿದ್ದು, ಉಳಿದಂತೆ ಕಿಚ್ಚ ಸುದೀಪ್, ತಮನ್ನಾ ಭಾಟಿಯಾ, ವಿಜಯ್ ಸೇತುಪತಿ, ಜಗಪತಿ ಬಾಬು ಇತ್ಯಾದಿ ಬಹುದೊಡ್ಡ ತಾರಾಂಗಣವೇ ಚಿತ್ರದಲ್ಲಿದೆ. ಅಲ್ಲದೇ ಅನುಷ್ಕಾ ಶೆಟ್ಟಿ ಕೂಡ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ತೆಲುಗು ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಜೀವನಾಧಾರಿತವಾಗಿದೆ. ಎಲ್ಲ ಅಂದುಕೊಂಡಂತಾದರೆ ಗಾಂಧಿಜಯಂತಿಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

CG ARUN

ಅರೆನಗ್ನಗೊಂಡ ಅಮಿಶಾ!

Previous article

ತಮಿಳು ನಟ ವಿಶಾಲ್ ಹೆಗ್ಗಣದಂತೆ: ನಿರ್ದೇಶಕ ಭಾರತಿರಾಜ್

Next article

You may also like

Comments

Leave a reply

Your email address will not be published. Required fields are marked *