ಸೈರಾಟ್ ಸಿನಿಮಾದ ಮೂಲಕ ತನ್ನ ಪ್ರಬುದ್ಧ ಅಭಿನಯ ಮತ್ತು ತುಂಟತನದ ಕುಚೇಷ್ಟೇಗಳಿಂದ ದೇಶದ ಯುವ ಮನಸ್ಸುಗಳನ್ನು ಅಲ್ಲೋಲ ಕಲ್ಲೋಲಗೊಳಿಸಿದ್ದ ರಿಂಕು ರಾಜ್ ಗುರು ಮೂರು ವರ್ಷಗಳ ಗ್ಯಾಪ್ ನ ನಂತರ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮರಾಠಿ ಸಿನಿಮಾ ಕಾಗರ್ ನಲ್ಲಿ ರಾಣಿ ಎನ್ನುವ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿಂಕು, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಗಳನ್ನು ಹಾಕುವ ಮೂಲಕ ಅಭಿಮಾನಿಗಳೊಮದಿಗೆ ಒಡನಾಟ ಹೊಂದಿರುವ ರಿಂಕು, ತಾನು ಇತರ ನಟಿಯಂತರಲ್ಲ ಎಂಬುದನ್ನೂ ಸಾಬೀತು ಮಾಡಿದ್ದಾರೆ.
ಕಾಗರ್ ಮರಾಠಿ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಮರಳಿರುವ ಆಕೆಯ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಸಿನಿಮಾವನ್ನು ಮಕರಂದ್ ಮಾನೆ ನಿರ್ದೇಶನ ಮಾಡಿದ್ದಾರೆ. ಕಾಗರ್ ಈಗಾಗಲೇ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ರಿಂಗುವಿಗೆ ಈ ಸಿನಿಮಾ ಮತ್ತಷ್ಟು ಬೇಡಿಕೆಯನ್ನು ಹೆಚ್ಚಿಸುವುದೋ ನೋಡಬೇಕು.