ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಟಬು ಮತ್ತೆ ಟಾಲಿವುಡ್ ಗೆ ಕಮ್ ಬ್ಯಾಕ್ ಆಗಿದ್ದಾರೆ. ಹನ್ನೊಂದು ವರ್ಷದ ಬಳಿಕ ಅಲ್ಲು ಅರ್ಜುನ್ ಚಿತ್ರದಲ್ಲಿ ಟಬು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ‘AA 19’ ಎಂದು ಶೀರ್ಷಿಕೆ ಇಡಲಾಗಿದೆ. ಒಂದು ಸಣ್ಣ ವಿಡಿಯೋ ಮೂಲಕ ಟಬು ಆಗಮನದ ವಿಚಾರವನ್ನು ಶೇರ್ ಚಿತ್ರತಂಡ ಶೇರ್ ಮಾಡಿದೆ.
‘AA 19’ ಸಿನಿಮಾ ಮುಂದಿನ ಸಂಕ್ರಾತಿ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. 1991ರಲ್ಲಿಯೇ ಟಾಲಿವುಡ್ ಸಿನಿಮಾವನ್ನು ಮಾಡಿದ್ದ ಟಬು ವೆಂಕಟೇಶ್ ನಟನೆಯ ಕೂಲಿ ನಂಬರ್ 1 ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ ಬಾಲಕೃಷ್ಣ, ನಾಗಾರ್ಜುನ ಹಾಗೂ ಚಿರಂಜೀವಿ ಸಿನಿಮಾಗಳಲ್ಲಿಯೂ ಕಾನಿಸಿಕೊಂಡಿದ್ದರು. ಪಾಂಡವುಡ ಟಬು ಅಭಿನಯಿಸಿದ ಕೊನೆಯ ತೆಲುಗು ಚಿತ್ರವಾಗಿತ್ತು. ಇನ್ನು ಬಾಲಿವುಡ್ ನಲ್ಲಿ ಸದ್ಯ ಸೈಫ್ ಅಲಿ ಖಾನ್ ಜೊತೆಗೆ ‘ಜವಾನಿ ಜಾನೆಮನ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Comments