ನಿರ್ದೇಶಕ ರಾಜಶೇಖರ್ ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಯ ಮೂಡಿನಲ್ಲಿದೆ. ಒಂದು ಹೊಸಬರ ತಂಡ ಕಟ್ಟಿಕೊಂಡು `ಬ್ಯಾಕ್ ಬೆಂಚರ್ಸ್’ ಚಿತ್ರವನ್ನು ರೂಪಿಸುವ ಸಾಹಸ ಮಾಡಿದ್ದವರು ರಾಜಶೇಖರ್. ಇದೀಗ ಈ ಚಿತ್ರ ಬಿಡುಗಡೆಗೊಂಡು ವಾರ ಕಳೆಯುವ ಮುನ್ನವೇ, ರಾಜ್ಯದ ನಾನಾ ಭಾಗಗಳಲ್ಲಿ ಭರ್ಜರಿ ಓಪನಿಂಗ್ ಸಿಗಲಾರಂಭಿಸಿದೆ. ಹೊಸತವನ್ನೇ ಆತ್ಮವಾಗಿಸಿಕೊಂಡಂತಿರುವ ಈ ಕಾಲೇಜು ಕೇಂದ್ರಿತ ಕಥೆಗೆ ನೋಡುಗರೆಲ್ಲ ಫಿದಾ ಆಗಿದ್ದಾರೆ. ಬಾಯಿಂದ ಬಾಯಿಗೆ ಹಬ್ಬಿಕೊಳ್ಳುತ್ತಿರುವ ಸದಭಿಪ್ರಾಯಗಳೇ ಸಿನಿಮಾ ಮಂದಿರಗಳು ಭರ್ತಿಯಾಗುವಂಥಾ ಕಮಾಲ್ ಮಾಡುತ್ತಿವೆ. ಇದೇ ರೀತಿ ಮುಂದುವರೆದರೆ ಬ್ಯಾಕ್ ಬೆಂಚರ್ಸ್ಗೆ ನಿರೀಕ್ಷೆಗೂ […]
ಭಿನ್ನ ಕಂಟೆಂಟಿನ ಮನ್ಸೂಚನೆಯೊಂದಿಗೆ ಕ್ರೇಜ್ ಹುಟ್ಟುಹಾಕಿರುವ ಚಿತ್ರ `ಬ್ಯಾಕ್ ಬೆಂಚರ್ಸ್’. ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಾಲೇಜು ಕೇಂದ್ರಿತ ಕಥೆ ಮತ್ತು ಬೇರೆ ಹೊಸತನದ ನಿರೂಪಣೆಯ ಸುಳಿವಿನೊಂದಿಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನೂ “ಬ್ಯಾಕ್ ಬೆಂಚರ್ಸ್” ಆಕರ್ಷಿಸಿದ್ದಾರೆ. ಪಿಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ನಿರ್ದೇಶಕರು ಕೂಡ ರಾಜಶೇಖರ್ ಅವರೆ. ಚಿತ್ರದ ಬಿಡುಗಡೆ ಮುಂಚಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ & ನಿರ್ಮಾಪಕ ರಾಜಶೇಖರ್, […]