ಚೌಕಿದಾರ್ ಸಿನಿಮಾ ತನ್ನ ಕ್ಯಾಚಿ ಟೈಟಲ್ ನಿಂದಲೇ ಗಾಂಧಿನಗರದ ಸಿನಿಮಾಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದ ಈ ಚಿತ್ರದ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಬಂಡೆ ಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ 53 ದಿನಗಳ ಕಾಲ ಚಿತ್ರೀಕರಣ ಮುಗಿಸಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಚೌಕಿದಾರ್ ಸಿನಿಮಾವನ್ನು 10 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಚೌಕಿದಾರ್ ಸಿನಿಮಾವನ್ನು […]
ಕೇಂಜ ಚೇತನ್ ಕುಮಾರ್ ನಿರ್ದೇಶನದ `ಚೌ ಚೌ ಬಾತ್’ ಈ ವರ್ಷ ಬಿಡುಗಡೆಗೊಂಡಿರುವ ಚೆಂದದ ಚಿತ್ರಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಒಂದಷ್ಟು ಪ್ರಯೋಗಾತ್ಮಕ ಅಂಶಗಳು, ಪ್ರೇಕ್ಷಕರನ್ನೇ ತನ್ನೊಳಗಿಳಿಸಿಕೊಂಡು ಕರೆದೊಯ್ಯುವ ಗುಣದ ದೃಷ್ಯದಿಂದ ಕಳೆಗಟ್ಟಿಕೊಂಡಿದ್ದ ಚಿತ್ರ `ಚೌ ಚೌ ಬಾತ್’. ಅತ್ಯತ್ತಮ ವಿಮರ್ಶೆ ಪಡೆದಿದ್ದ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದ್ದ ಚೌ ಚೌ ಬಾತ್ ಇದೀಗ ಸಿನಿ ಬಜಾóರ್ ಎಂಬ ಡಿಜಿಟಲ್ ಥಿಯೇಟರಿನಲ್ಲಿ ಬಿಡುಗಡೆಗೊಂಡಿದೆ. ಸಿನಿ ಬಜಾರ್ ನಲ್ಲಿ ಬಿಡುಗಡೆಗೊಂಡ ಮೊದಲ ದಿನವೇ […]