ಇದು ಪಕ್ಕಾ ಮಾಸ್ ಸಿನಿಮಾ ಅನ್ನೋದರಲ್ಲಿ ಡೌಟೇ ಇಲ್ಲ!
ಚಿತ್ರೀಕರಿಸಿದ ಒಟ್ಟಾರೆ ಸಿನಿಮಾದ ಒಳ್ಳೆ ಶಾಟ್ಗಳನ್ನು ತೆಗೆದು, ಒಂದು ಕಡೆ ಜೋಡಿಸಿ, ಟೀಸರ್ ರೂಪದಲ್ಲಿ ಬಿಡೋದು ಕೆಲವರ ಶೈಲಿ. ಇಡೀ ಸಿನಿಮಾದಲ್ಲಿ ಹೇಳಬೇಕಾದನ್ನು ಕೆಲವೇ ಸೆಕೆಂಡುಗಳಲ್ಲಿ ಹೇಳುವುದು ಮತ್ತೆ ಕೆಲವರ ವರಸೆ. ʻಚೌಕಿದಾರ್ʼ ಟೀಸರ್ ನೋಡಿದರೆ, ನಿಜಕ್ಕೂ ಆಶ್ಚರ್ಯವಾಗುತ್ತದೆ. ಈ ಪುಟ್ಟ ಟೀಸರೇ ಒಂದು ಜಗತ್ತನ್ನು ತೆರೆದಿಟ್ಟಿದೆ. ದೊಡ್ಡ ಬಿಲ್ಡಿಂಗಿನಿಂದ ಆರಂಭಗೊಳ್ಳುತ್ತದೆ. ಹಿಪ್ಪುನೇರಳೆ ಸೊಪ್ಪು ಕೊಯ್ಯುತ್ತಿರುವ ನಾಯಕಿ, ರೇಷ್ಮೆ ಗೂಡಿದ ದೊಡ್ಡ ಮಾರುಕಟ್ಟೆ, ಅದರ ನಡುವಲ್ಲೊಬ್ಬ ತಿಂದು ಮುಕ್ಕುವ ಭಕ್ಷಕ, ಸ್ಲಮ್ಮು, ಸೆಕ್ಯೂರಿಟಿ ಗಾರ್ಡುಗಳ ಸಿಸ್ಟಮ್ಮು, ಭಾರೀ […]
ಬಂಡೆ ಮಹಾಕಾಳಿ ಆಶೀರ್ವಾದದೊಂದಿಗೆ ಸೆಟ್ಟೇರಿತು ಪೃಥ್ವಿ ಅಂಬಾರ್ ‘ಚೌಕಿದಾರ್’.
‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬಾರ್ ನಟಿಸುತ್ತಿರುವ ‘ಚೌಕಿದಾರ್’ ಸಿನಿಮಾಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ಮುಹೂರ್ತ ನೆರವೇರಿದೆ. ಚಿತ್ರದ ನಿರ್ಮಾಪಕರಾದ ಕಲ್ಲಹಳ್ಳಿ ಚಂದ್ರಶೇಖರ್ ಕ್ಲ್ಯಾಪ್ ಮಾಡಿದರೆ, ಸಾಯಿಕುಮಾರ್ ಕ್ಯಾಮರಾ ಸ್ವಿಚ್ ಆನ್ ಮಾಡಿದರು. ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ದೊಡ್ಮನೆ ಕುಡಿ ಧನ್ಯರಾಮ್ ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಮುಹೂರ್ತದ ಬಳಿಕ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಸಿನಿಮಾ ಹಂಚಿಕೊಂಡಿತು. ನಿರ್ದೇಶಕ […]