ಬಾಗಲಕೋಟೆಯ ಶ್ರೀವಾಸವಿ ಚಿತ್ರಮಂದಿರದಲ್ಲಿ ಬಹಳ ದಿನಗಳ ನಂತರ ಕನ್ನಡ ಚಿತ್ರವೊಂದು ಐವತ್ತು ದಿನಗಳ ಪ್ರದರ್ಶನ ಕಂಡಿರುವ “ದೇಸಾಯಿ” ಚಲನಚಿತ್ರ, ಉತ್ತರ ಕರ್ನಾಟಕದ ಕೌಟುಂಬಿಕ ಚಲನಚಿತ್ರವಾಗಿದ್ದು, ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಐವತ್ತು ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವ ಕಾರಣ ಚಿತ್ರದ ನಾಯಕ ಪ್ರವೀಣ್ ಕುಮಾರ್, ನಿರ್ದೇಶಕ ನಾಗಿರೆಡ್ಡಿ ಭಡ, ನಿರ್ಮಾಪಕ ಮಹಾಂತೇಶ್ ವಿ ಚೋಳಚ್ಚಗುಡ್ಡ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಒಪ್ಪತೇಶ್ವರ ಮಹಾಸ್ವಾಮಿಗಳು ಗುಳೇದಗುಡ್ಡ, ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಗಮಿಸಿ ಚಲನಚಿತ್ರ […]
ಗ್ರಾಮೀಣ ಸೊಗಡಿನ ಕೌಟುಂಬಿಕ ಕಥಾ ಹಂದರ ಹೊಂದಿರುವ ಬಾಗಲಕೋಟೆಯ ಮಹಾಂತೇಶ ಚೋಳಚಗುಡ್ಡ ಕಥೆ ಬರೆದು ನಿಮಿ೯ಸಿರುವ, ನಾಗಿ ರೆಡ್ಡಿ ನಿದೇ೯ಶನದ, ಪ್ರವೀಣ ಕುಮಾರ್ ಮತ್ತು ರಾಧ್ಯ ಅಭಿನಯದ “ದೇಸಾಯಿ” ಚಲನಚಿತ್ರವನ್ನು ಇತ್ತೀಚಿಗೆ ಬೆಂಗಳೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಶ್ರೀ ಲಕ್ಷ್ಮಣ ಸವದಿ ಅವರು ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು. ಬಾಗಲಕೋಟೆಯ ವಾಸವಿ ಚಿತ್ರಮಂದಿರದಲ್ಲಿ ಬಾಗಲಕೋಟೆ ಜಿಲ್ಲಾ ಅಧಿಕಾರಿಗಳಾದ ಜಾನಕಿ ಕೆ ಎಂ ಹಾಗೂ ಎಸ್ ಪಿ ಅಮರನಾಥ ರೆಡ್ಡಿ ಇವರು ಕುಟುಂಬ ಸಮೇತರಾಗಿ ಚಿತ್ರವನ್ನು […]
2.5/5 ಅದು ಉತ್ತರ ಕರ್ನಾಟಕದ ದೊಡ್ಡ ಕುಟುಂಬ. ಯಾವುದೋ ಕಾರಣಕ್ಕೆ ಮಗ-ಸೊಸೆ ಮನೆಯಿಂದ ದೂರವಾಗಿರುತ್ತಾರೆ. ದೇಸಾಯಿ ಮನೆತನದಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಮನೆತನದ ಮರ್ಯಾದೆ ತೆಗೆಯಲು ನಿಂತವನೊಬ್ಬ. ಎಲ್ಲರನ್ನೂ ಒಟ್ಟುಮಾಡಲು ಬಂದವನೊಬ್ಬ. ಈ ನಡುವೆ ಚೆಲ್ಲಾಪಿಲ್ಲಿಯಾದ ಕುಟುಂಬ ಮತ್ತೆ ಜೊತೆಯಾಗಲು ಸಾಧ್ಯವಾಗುತ್ತದಾ? ಹಾಗೊಮ್ಮೆ ಎಲ್ಲರೂ ಸೇರುವುದಾದರೆ ಏನೆಲ್ಲಾ ವಿಚಾರಗಳು ಬಂದು ಹೋಗುತ್ತವೆ? ಎಂಬಿತ್ಯಾದಿ ವಿಚಾರಗಳ ಸುತ್ತ ಬೆಸೆದುಕೊಂಡಿರುವ ಕೌಟುಂಬಿಕ ಕಥಾಹಂದರದ ಚಿತ್ರ ದೇಸಾಯಿ. ಒಂದು ಕಾಲದಲ್ಲಿ ಅಪ್ಪ ಅಮ್ಮನನ್ನು ತೊರೆದು ಬಂದ ಮಗ ತನ್ನ ಬದುಕಲ್ಲಿ ಮಗ […]