ಗೋಪಿಲೋಲ ಸಿನಿಮಾ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ಈ ಚಿತ್ರದ ಎರಡು ಗೀತೆಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಇದೀಗ ಮೂರನೇ ಹಾಡು ಬಿಡುಗಡೆ ಮಾಡಲಾಗಿದೆ. ಕೇಶವ ಚಂದ್ರ ಬರೆದ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಹಾಗೂ ವಾರಿಜಶ್ರೀ ಕಂಠ ಕುಣಿಸಿದ್ದಾರೆ. ಮಿಥುನ್ ಅಶೋಕನ್ ಟ್ಯೂನ್ ಹಾಕಿದ್ದು, ನಾಯಕ ಮಂಜುನಾಥ್ ಅರಸು ಹಾಗೂ ನಿಮಿಷಾ ಕೆ ಚಂದ್ರ ಇದ್ದಕ್ಕಿದ್ದಂತೆ ಪ್ರಪಂಚವೆಲ್ಲಾ ಯಾಕೋ ಸುತ್ತಿದಂಗೆ ಆಗುತೈತೆ ಅಂತಾ ಕುಣಿದು ಕುಪ್ಪಳಿಸಿದ್ದಾರೆ. ಆರ್ ರವೀಂದ್ರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಗೋಪಿಲೋಲ ಸಿನಿಮಾವನ್ನು […]
ಈ ಹಿಂದೆ ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಆರ್ ರವೀಂದ್ರ ಈಗ ಗೋಪಿಲೋಲ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೀಗ ಈ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಟೆಯಿತು. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ಉಮೇಶ್ ಬಣಕಾರ್ ನಿನ್ನೆ ನಿನ್ನೆ ನೆಚ್ಚಿಕೊಂಡೆ ಎಂಬ ಹಾಡನ್ನು ಅನಾವರಣ ಮಾಡಿದರು. […]
ಆರ್ ರವೀಂದ್ರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಗೋಪಿಲೋಲ ಸಿನಿಮಾದ ಸ್ಪೆಷಲ್ ನಂಬರ್ ಬಿಡುಗಡೆಯಾಗಿದೆ. ಕಣ್ ಕಣ್ ಟಾಕಿಂಗ್, ಕೈ ಕೈ ಟಚ್ಚಿಂಗ್ ಎಂಬ ಹಾಡಿಗೆ ಕೇಶವ ಚಂದ್ರ ಸಾಹಿತ್ಯ ಬರೆದಿದ್ದು, ಮಿದುನ್ ಅಸೋಕನ್ ಚೆನ್ನೈ ಸಂಗೀತ ಒದಗಿಸಿದ್ದು, ಶಶಾಂಕ್ ಶೇಷಗಿರಿ ಹಾಗೂ ಗೀತಾ ಭಟ್ ಧ್ವನಿಯಾಗಿದ್ದಾರೆ. ಧನಂಜಯ್ ನೃತ್ಯ ಸಂಯೋಜನೆಗೆ ನಾಯಕ ಮಂಜುನಾಥ್ ಅರಸು ಹಾಗೂ ಜಾಹ್ನವಿ ಹೆಜ್ಜೆ ಹಾಕಿದ್ದಾರೆ. ಸಹಜ ಕೃಷಿ ಹಾಗೂ ಪ್ರೇಮ ಕಥಾ ಹಂದರ ಹೊಂದಿರುವ ಗೋಪಿಲೋಲ ಸಿನಿಮಾಗೆ ಎಸ್.ಆರ್.ಸನತ್ ಕುಮಾರ್ ಬಂಡವಾಳ […]