ಆ ಊರಿನ ಸಮಾರಂಭವೊಂದಕ್ಕೆ ಚೀಫ್ ಗೆಸ್ಟ್ ಆಗಿ ಸ್ಟಾರ್ ನಟ ಮೈಕೆಲ್ ಮಧು ಬರಬೇಕಿರುತ್ತದೆ. ಆದರೆ ಆತ ಅಚಾನಕ್ಕಾಗಿ ಇಹಲೋಕ ತ್ಯಜಿಸಿರುತ್ತಾನೆ. ಇನ್ನು ಅತಿಥಿಯನ್ನು ಕರೆಸಲು ಉಳಿದಿರುವ ಕಾಂಟ್ಯಾಕ್ಟು ಇರೋದು ಕೃಷ್ಣಪ್ಪನಿಗೆ ಮಾತ್ರ. ಆ ಊರಲ್ಲಿ ಮೂರು ಜನ ಕೃಷ್ಣಪ್ಪಗಳಿರುತ್ತಾರೆ. ಅದರಲ್ಲಿ ಮೂರನೇಯವನು ಗಣಿತದ ಮೇಷ್ಟ್ರು. ಈ ಥರ್ಡ್ ಕೃಷ್ಣಪ್ಪನ ಸ್ನೇಹಿತನ ಮೂಲಕ ಊರಿಗೆ ಚೀಫ್ ಮಿನಿಸ್ಟರ್ ಅನ್ನು ಕರೆಸುವ ಪ್ರಯತ್ನವಾಗುತ್ತದೆ. ಈ ಹಂತದಲ್ಲಿ ಏನೇನಾಗುತ್ತದೆ? ಯಾರೆಲ್ಲಾ ಮೋಸ ಹೋಗುತ್ತಾರ್. ಫ್ರಾಡ್ ಅನ್ನುವ ಹಣೆಪಟ್ಟಿ ಕಟ್ಟಿಸಿಕೊಂಡ ಕೃಷ್ಣಪ್ಪ […]
ವಿಭಿನ್ನ ಕಥಾನಕದ ಮೂಲಕವೇ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಹೊರಟಿರುವ ಸಿನಿಮಾ ಮೂರನೇ ಕೃಷ್ಣಪ್ಪ. ಶುರುವಾದಾಗಿನಿಂದಲೂ ಇಲ್ಲಿವರೆಗೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ಈ ಚಿತ್ರದ ಮೊದಲ ನೋಟ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಮೂರನೇ ಕೃಷ್ಣಪ್ಪ ಟ್ರೇಲರ್ ಬಿಡುಗಡೆಯಾಗಿದೆ. ಲೂಸ್ ಮಾದ ಯೋಗಿ ಸಂಭಾಷಣೆಯಲ್ಲಿ ಶುರುವಾಗುವ ಟ್ರೇಲರ್ನಲ್ಲಿ ಕೋಲಾರ ಕನ್ನಡ , ರಂಗಾಯಣ ರಘು, ಸಂಪತ್ ಮೈತ್ರಿಯಾಯಂತಹ ಅದ್ಭುತ ಕಲಾವಿದರ ಅಭಿನಯ, ಹಳ್ಳಿ ಸೊಗಡನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಟ್ರೇಲರ್ ಪ್ರಾಮಿಸಿಂಗ್ ಆಗಿದ್ದು, ಸಿನಿಪ್ರಿಯರಿಗೆ ಮನರಂಜನೆ ಗ್ಯಾರೆಂಟಿ ಎಂಬ ಸಂದೇಶ ರವಾನಿಸಿದೆ. […]