ಬದುಕಿನ ಪಾಠ ಹೇಳಿಕೊಡುವ ಔಟ್ ಆಫ್ ಸಿಲಬಸ್
ನಿಜಾ ತಾನೆ? ಶಿಕ್ಷಣವನ್ನು ಹೇಳಿಕೊಡಲು ಅಗಣಿತ ವಿದ್ಯಾಸಂಸ್ಥೆಗಳು, ಯೂನಿವರ್ಸಿಟಿಗಳು ಇವೆ. ಬದುಕಿನ ಪಾಠ ಹೇಳಿಕೊಡಲು ಯಾವ ಶಾಲೆಯೂ ಇಲ್ಲ. ತುಂಬಾ ಜನ ಅಕಾಡೆಮಿಕ್ ಆಗಿ ಜಾಸ್ತಿ ಕಲಿತಿರುತ್ತಾರೆ. ಅತಿ ದೊಡ್ಡ ಹುದ್ದೆಯಲ್ಲಿರುತ್ತಾರೆ. ಬುದ್ಧಿವಂತರು ಅನ್ನಿಸಿಕೊಂಡಿರುತ್ತಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆಯನ್ನೂ ಮಾಡಿರುತ್ತಾರೆ. ಹಣ ಸಂಪಾದನೆ ಅನ್ನೋದು ಅವರ ಪಾಲಿಗೆ ತುಂಬಾನೇ ಸಣ್ಣ ವಿಷಯ. ಆದರೆ ಖಾಸಗೀ ಬದುಕಿನಲ್ಲಿ ಗೆಲ್ಲುವ ಕಲೆ, ಬುದ್ದಿವಂತಿಕೆ, ಸ್ಥಿತಪ್ರಜ್ಞ ಮನಸ್ಥಿತಿ, ಪ್ರಬುದ್ಧತೆ ಸಿದ್ದಿಸಿರೋದಿ ಲ್ಲ.. ಪರ್ಸನಲ್ ಲೈಫೆನ್ನುವುದು ನಿಜಕ್ಕೂ ಹಡಾಲೆದ್ದುಹೋಗಿರುತ್ತದೆ. ಎಲ್ಲದರಲ್ಲೂ ಗೆದ್ದವರು ಬದುಕುವ […]