ಕಳೆದ ವರ್ಷ ಸ್ಯಾಂಡಲ್ ವುಡ್ ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕಂಡ ಸಿನಿಮಾ ಟಗರು. ಈ ಚಿತ್ರದ ಮೂಲಕ ಡಾಲಿ ಪಾತ್ರಧಾರಿ ಧನಂಜಯ್ ಗೆ ಸ್ಯಾಂಡಲ್ ವುಡ್ ನಲ್ಲಿ ಭದ್ರವಾಗಿ ನೆಲೆಯೂರಲೂ ಒಂದು ಪ್ಲಾಟ್ ಫರ್ಮ್ ಕೂಡ. ಸಿನಿಮಾ ಮಾತ್ರದಲ್ಲಿ ಚಿತ್ರದ ಪ್ರತಿಯೊಂದು ಹಾಡು ಕೇಳುಗರಲ್ಲಿ ಪುಳಕವನ್ನುಂಟು ಮಾಡಿತ್ತು. ಅದರಲ್ಲೂ ಟಗರು ಬಂತು ಟಗರು ಟೈಟಲ್ ಸಾಂಗು ಪಡ್ಡೆ ಹೈಕಳಿಗೆ ರಸದೂಟವನ್ನೇ ನೀಡಿತ್ತು.

ಕನ್ನಡಿಗರ ಮನಗೆದ್ದಿದ್ದ ಈ ಸಿನಿಮಾ ಭಾರತದ ಗಡಿದಾಟಿ ವಿದೇಶದಲ್ಲಿಯೂ ಅಬ್ಬರಿಸುತ್ತಿದ್ದು, ಇದೇ ಟೈಟಲ್ ಸಾಂಗಿಗೆ ವಿದೇಶಿ ಮಂದಿ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಕಾರ್ಯಕ್ರಮವೊಂದರಲ್ಲಿ ಟಗರು ಕನ್ನಡ ಹಾಡಿಗೆ ಯುವಕರು ಫುಲ್ ಜೋಶ್ ನಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಈ ವಿಡಿಯೋವನ್ನು ನಿರ್ಮಾಪಕ ಶ್ರೀಕಾಂತ್ ಟ್ವಿಟರ್ ನಲ್ಲಿ ಶೇರ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

CG ARUN

ಅರುಣಿಮಾ ಘೋಷ್ ವಿರುದ್ಧ ಅಶ್ಲೀಲ ಪದ ಬಳಕೆ ವ್ಯಕ್ತಿ ಬಂಧನ!

Previous article

ಕಿರುತೆರೆಗೆ ಇಂತಿ ನಿನ್ನ ಪ್ರೀತಿಯ ಕಿಟ್ಟಿ!

Next article

You may also like

Comments

Leave a reply

Your email address will not be published. Required fields are marked *