ತೂಗುದೀಪ ಕುಟುಂಬದ ಮನೋಜ್ ನಾಯಕನಟನಾಗಿ ಎಂಟ್ರಿ ಕೊಡುತ್ತಿರುವ `ಟಕ್ಕರ್’ ಸಿನಿಮಾ ಶೂಟಿಂಗ್ ಸಮಯದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ನಾಗೇಶ್ ಕೋಗಿಲು ನಿರ್ಮಾಣದ `ಟಕ್ಕರ್’ ಸಿನಿಮಾ ಬಹುತೇಕ ಮೈಸೂರಿನಲ್ಲಿ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿನಲ್ಲಿ ಉಳಿದ ಭಾಗದ ಚಿತ್ರೀಕರಣವನ್ನು ಪೂರೈಸುತ್ತಿದೆ. ಆರಡಿ ಹೈಟು, ರಗಡ್ ಲುಕ್ಕು ಹೊಂದಿರುವ ಮನೋಜ್ ಜೊತೆ ಯಂಗ್ ಅಂಡ್ ಎನರ್ಜೆಟಿಕ್ ವಿಲನ್ ಆಗಿ ಭಜರಂಗಿ ಲೋಕಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಎಚ್ ಎಂ ಟಿಯಲ್ಲಿ ಡಿಫರೆಂಟ್ ಡ್ಯಾನಿ ಸಂಯೋಜಿಸಿದ್ದ ಫಯರ್ ಫೈಟ್ ಕೂಡಾ ಅದ್ಭುತವಾಗಿ ಚಿತ್ರೀಕರಣಗೊಂಡಿದೆಯಂತೆ. ಕಿರುತೆರೆಯ ವೀಕ್ಷಕರ ಪಾಲಿಗೆ ಪುಟ್ ಗೌರಿ ಎಂತಲೇ ಫೇಮಸ್ಸಾಗಿರುವ ರಂಜನಿ ರಾಘವನ್ ಟಕ್ಕರ್ ಸಿನಿಮಾದಲ್ಲಿ ಮನೋಜ್ಗೆ ಜೋಡಿಯಾಗಿದ್ದಾರೆ. ಇನ್ನು ಹಾಡುಗಳ ಚಿತ್ರೀಕರಣ ಮುಗಿದರೆ `ಟಕ್ಕರ್’ ಚಿತ್ರೀಕರಣ ಕಂಪ್ಲೀಟ್ ಆಗಲಿದೆ.
ವಿಶೇಷ ವಿಚಾರವೆಂದರೆ, ನೆನ್ನೆ ಟಕ್ಕರ್ ಚಿತ್ರದ ನಾಯಕನಟ ಮನೋಜ್, ನಿರ್ಮಾಪಕ ನಾಗೇಶ್ ಕೋಗಿಲು ಮತ್ತು ನಿರ್ದೇಶಕ ರಘು ಸಮೇತ ತಂಡದ ಪ್ರಮುಖರು `ಯಜಮಾನ’ ಚಿತ್ರದ ಚಿತ್ರೀಕರಣಕ್ಕೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ತನ್ನ ಸಿನಿಮಾದ ಕುರಿತಾದ ಆಗುಹೋಗುಗಳನ್ನು ಆಗಿದ್ದಾಂಗ್ಗೆ ದರ್ಶನ್ ಅವರಿಗೆ ವರದಿ ಒಪ್ಪಿಸೋದು ಮತ್ತು ತನ್ನ ಮಾವಂದಿರ ಬಳಿ ಗ್ರೀನ್ ಸಿಗ್ನಲ್ ಪಡೆದು ಮುಂದಡಿ ಇಡೋದು ಮನೋಜ್ ರೀತಿ. ಹಾಗೆ, `ಟಕ್ಕರ್’ ಸಿನಿಮಾದ ಈ ವರೆಗೆ ಯಾವೆಲ್ಲಾ ಹಂತ ಪೂರೈಸಿದೆ ಮತ್ತು ಮುಂದಿನ ಯೋಜನೆಗಳ ಕುರಿತಾಗಿ ಬಾಸ್ಗೆ ವರದಿ ಒಪ್ಪಿಸಿ ಬಂದಿದ್ದಾರಂತೆ. ಹಾಗೆಯೇ, ಚಿತ್ರದ ಕುರಿತಾದ ಎಲ್ಲ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ತಿಳಿದುಕೊಂಡ ದರ್ಶನ್ `ಟಕ್ಕರ್’ ಟೀಂಗೆ ಬೇಕಿರುವ ಎಲ್ಲ ಮಾರ್ಗದರ್ಶನವನ್ನೂ ನೀಡಿದ್ದಾರೆ ಅನ್ನೋದು ಸದ್ಯ ಕೇಳಿಬಂದಿರುವ ಸುದ್ದಿ. ಸದ್ಯ ಕನ್ನಡದ ಸೂಪರ್ ಸ್ಟಾರ್ ಆಗಿ ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಾ ಬಿಡುವೇ ಇಲ್ಲದಿದ್ದರೂ ತಮ್ಮ ಕುಟುಂಬದ ಹುಡುಗನ ಸಿನಿಮಾಗೆ ಈ ಮಟ್ಟಿಗೆ ಸಪೋರ್ಟ್ ಮಾಡುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ.
ದರ್ಶನ್ ಅವರ ಮನೆ ಹುಡುಗ ಹೀರೋ, ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ ಹುಡುಗಿ ಹೀರೋಯಿನ್ನು, ಡೇವಿಡ್ ವಿಲಿಯಮ್ಸ್ ರಂಥಾ ಕ್ರಿಯಾಶೀಲ ಛಾಯಾಗ್ರಾಹಕ, ಈಟಿವಿ ಶ್ರೀಧರ್, ಸುಮಿತ್ರಾ, ಭಜರಂಗಿ ಲೋಕಿ, ಸಾಧುಕೋಕಿಲಾ ಸೇರಿದಂತೆ ಅದ್ಭುತ ತಾರಾಗಣದ ಜೊತೆಗೆ `ಒಡೆಯ’ನ ಗೈಡೆನ್ಸು… ಇಷ್ಟೆಲ್ಲಾ ತಮ್ಮ ಎರಡನೇ ಚಿತ್ರಕ್ಕೇ ಪಡೆದಿರೋದು ನಿರ್ಮಾಪಕ ನಾಗೇಶ್ ಕೋಗಿಲು ಪಾಲಿಗೆ ನೂರಾನೆ ಬಲ ಬಂದಂತಾಗಿದೆ.
#
No Comment! Be the first one.