ಕಂಡ ಕನಸು, ಸವೆಸಿದ ಹಾದಿಯೆಲ್ಲ ಸಾರ್ಥಕ ಅನ್ನಿಸೋ ಘಳಿಗೆಯಲ್ಲೇ ಹುಟ್ಟಿದ ದಿನವನ್ನು ಎದುರುಗೊಳ್ಳೋದಿದೆಯಲ್ಲಾ? ಹುಟ್ಟಿದ ದಿನವೆಂಬುದು ಹಬ್ಬ ಅನ್ನಿಸೋದು ಅಂಥಾ ಸಂದರ್ಭದಲ್ಲಿಯೇ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬದ ಮನೋಜ್ ಪಾಲಿಗಿದು ಅಕ್ಷರಶಃ ಹುಟ್ಟಿದ ಹಬ್ಬ!
ತಮ್ಮ ಮಾವ ದರ್ಶನ್ ಅವರ ಪ್ರಭಾವದಿಂದಲೇ ಬೆಳೆದು ಬಂದು ಓರ್ವ ಸಾಮಾನ್ಯ ಹುಡುಗನಂತೆಯೇ ಬಣ್ಣದ ಲೋಕದ ಕನಸು ಹೊತ್ತು ಅಡ್ಡಾಡಿದವರು ಮನೋಜ್. ಅಖಂಡ ಎಂಟು ವರ್ಷಗಳಿಂದ ನಾಯಕ ನಟನಾಗೋ ಆಕಾಂಕ್ಷೆಯಿಂದ ಆ ಹಾದಿಯಲ್ಲಿ ಛಲ ಬಿಡದೇ ಪ್ರಯತ್ನದಲ್ಲಿದ್ದ ಅವರು ಸಿಕ್ಕ ಅವಕಾಶಗಳನ್ನೆಲ್ಲ ಚೆಂದಗೆ ಬಳಸಿಕೊಳ್ಳುತ್ತಾ ಇದೀಗ ಹುಟ್ಟು ಹಬ್ಬದ ಘಳಿಗೆಯಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಹೊರ ಹೊಮ್ಮೋ ಕ್ಷಣಗಳು ಸಾಕಾರಗೊಳ್ಳುತ್ತಿವೆ.
ದರ್ಶನ್ ಅವರ ಸೋದರಳಿಯ ಮನೋಜ್ ನಾಯಕನಾಗಿ ನಟಿಸುತ್ತಿರೋ ಟಕ್ಕರ್ ಚಿತ್ರ ಇದೀಗ ಚಿತ್ರೀಕರಣದ ಅಂತಿಮ ಹಂತ ತಲುಪಿಕೊಂಡಿದೆ. ಇನ್ನೇನು ವೇಗವಾಗಿ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡು ಬಿಡುಗಡೆಗೂ ಸಜ್ಜಾಗಲಿದೆ. ಆದ್ದರಿಂದಲೇ ಮನೋಜ್ ಪಾಲಿಗೆ ಈ ವರ್ಷದ ಹುಟ್ಟಿದ ದಿನ ನಿಜಕ್ಕೂ ಹಬ್ಬ. ಅವರ ಇಷ್ಟು ವರ್ಷಗಳ ಪರಿಶ್ರಮಗಳೆಲ್ಲವೂ ಇದೀಗ ಫಲಪ್ರದವಾಗಿದೆ.
ಅಂದಹಾಗೆ ಮನೋಜ್ ಅವರ ಮೊದಲ ಚಿತ್ರವನ್ನು ರಘು ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಈ ಹಿಂದೆ ಹುಲಿರಾಯ ಮಾಡಿದ್ದ ನಾಗೇಶ್ ಕೋಗಿಲು ನಿರ್ಮಾಣ ಮಾಡಿದ್ದಾರೆ. ಈ ಸಲದ ಹುಟ್ಟುಹಬ್ಬ ಮನೋಜ್ ಪಾಲಿಗೆ ವಿಶೇಷವಾಗಲು ಮತ್ತೇನು ಬೇಕು? ಬಹು ಕಾಲದ ಕನಸು ನನಸಾದ ಖುಷಿಯಲ್ಲಿರೋ ಮನೋಜ್ ಅವರಿಗೆ ಭರ್ಜರಿಯಾದ ಗೆಲುವು ಸಿಕ್ಕಿ, ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕರ ಸಾಲಿನಲ್ಲಿ ನೆಲೆಗೊಳ್ಳುವಂತಾಗಲೆಂಬುದು ನಮ್ಮ ಹಾರೈಕೆ…
#
No Comment! Be the first one.