ಲೇಖಕಿ ವಿಜಯಲಕ್ಷ್ಮಿ ಮಂಜುನಾಥರೆಡ್ಡಿ ಅವರು ಬರೆದಿರುವ ಕತ್ತಲು ಕಾದಂಬರಿಯ ಆಧಾರಿತ ಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿದ್ದು ಅದಕ್ಕೆ ತಮಸ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಇತ್ತೀಚಿಗಷ್ಟೇ ವಿಜಯನಗರದ ಆದಿಚುಂಚನಗಿರಿ ಮಠದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರು ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

ತಮಸ್ ಸಿನಿಮಾವೊಂದು ಟ್ರೈಯಾಂಗಲ್ ಲವ್ ಸ್ಟೋರಿಯಾಗಿದ್ದು, ಈ ಚಿತ್ರವನ್ನು ರೆಬಲ್ ಸ್ಟಾರ್ ಅಂಬರೀಶ್ ಅವರ ಅಪ್ಪಟ ಅಭಿಮಾನಿ ಸ್ವಾತಿ ಅಂಬರೀಶ್ ನಿರ್ದೇಶಿಸಿ ನಿರ್ಮಾಣವನ್ನು ಮಾಡುತ್ತಿದ್ದಾರೆ.  ಲೂಸ್ ಮಾದ ಯೋಗಿ ಅವರ ಅಣ್ಣ ಮಹೇಶ್ ನಾಯಕನಾಗಿ ನಟಿಸುತ್ತಿದ್ದು, ಅಮೃತಾಗೌಡ ಮತ್ತು ಸೋನುಗೌಡ ನಾಯಕಿಯರಾಗಿ ನಟಿಸುತ್ತಿದ್ಧಾರೆ. 35 ದಿನಗಳ ಕಾಲ ತಮಸ್ ಶೂಟಿಂಗ್ ನಡೆಸುವ ಯೋಜನೆ ಹಾಕಿಕೊಂಡಿದ್ದು, ದೇವನಹಳ್ಳಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಬಳಿಯ ದೇವರಮನೆ ಕಡೆಗಳಲ್ಲಿ  ಚಿತ್ರೀಕರಣ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ.

CG ARUN

ಫ್ಯಾನು ತಿರುಗಲೇ ಇಲ್ಲ!

Previous article

ಡೋಂಟ್ ವರಿ ಕೋಮಲ್!

Next article

You may also like

Comments

Leave a reply

Your email address will not be published. Required fields are marked *