ತಮಿಳು ರಾಕರ್ಸ್ ತಂಡದ ಉಪಟಳ ಒಂದೆರಡಲ್ಲ. ಬೇಡ ಬೇಡವೆಂದುಕೊಂಡೇ ಬಿಡುಗಡೆಯಾಗುವ ಸಾಕಷ್ಟು ಸಿನಿಮಾಗಳ ಮೇಲೆ ತಮಿಳು ರಾಕರ್ಸ್ ತಂಡ ಹದ್ದಿನ ಕಣ್ಣಿಟ್ಟಿದ್ದು, ದಿನ ಕಳೆಯುವಷ್ಟರಲ್ಲಿಯೇ ಅದನ್ನು ಆನ್ ಲೈನ್ ನಲ್ಲಿ ಸಿಗುವಂತೆ ಸೋರಿಕೆ ಮಾಡಿಬಿಡುತ್ತಿದೆ. ಈ ಕುರಿತು ಆ ತಂಡದ ವಿರುದ್ಧ ಯಾರೂ ಕಠಿಣ ಕ್ರಮ ತೆಗೆದುಕೊಳ್ಳದೇ ಫ್ರೀ ಬಿಟ್ಟಿರುವುದಕ್ಕೂ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಸದ್ಯ ಸ್ವಾತಂತ್ರ್ಯೋತ್ಸವದಂದು ಬಿಡುಗಡೆಯಾದ ಸೇಕ್ರೆಡ್ ಗೇಮ್ಸ್ 2 ಸರಣಿಯ ಸಿನಿಮಾ ಕೂಡ ಆನ್ ಲೈನ್ ನಲ್ಲಿ ಲೀಕ್ ಆಗಿದ್ದು, ಇದರಿಂದ ನೆಟ್ ಫ್ಲಿಕ್ಸ್ ಗೆ ಭಾರಿ ನಷ್ಟ ಎದುರಾಗಿದೆ. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳನ್ನು ಬಿಡುಗಡೆಯಾದ ದಿನವೇ ಆನ್ ಲೈನ್ ನಲ್ಲಿ ಹಂಚುವ ಮೂಲಕ ಪೈರಸಿ ಲೋಕದಲ್ಲಿ ಹೊಸ ಕ್ರಾಂತಿ ಹಾಗೂ ನಿರ್ಮಾಪಕರಿಗೆ ಭೀತಿ ಉಂಟು ಮಾಡುವುದರಲ್ಲಿ ತಮಿಳ್ ರಾಕರ್ಸ್ ಮಂಚೂಣಿಯಲ್ಲಿ ನಿಂತಿದೆ. ಈಗ ನೆಟ್ ಫ್ಲಿಕ್ಸ್ ಹಾಗೂ ಅಮೆಜಾನ್ ನಂಥ್ ಆಪ್ ಅಧಾರಿತ ಸರಣಿಗಳನ್ನು ಕೂಡಾ ತಮಿಳ್ ರಾಕರ್ಸ್ ಪೈರಸಿ ಮಾಡಿ ಆನ್ ಲೈನ್ ನಲ್ಲಿ ಹಂಚಲು ಶುರು ಮಾಡಿದೆ. ಈ ಮುಂಚೆ ಎಚ್ ಬಿಒ ಸರಣಿಯ್ ಗೇಮ್ ಆಫ್ ಥ್ರೋನ್ಸ್, ನೆಟ್ ಫ್ಲಿಕ್ಸ್ ನ ನಾರ್ಕೋಸ್ ಸೇರಿದಂತೆ ಹಲವು ಜನಪ್ರಿಯ ಸರಣಿಯನ್ನು ತಮಿಳ್ ರಾಕರ್ಸ್ ಲೀಕ್ ಮಾಡಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಸೇಕ್ರೆಡ್ ಗೇಮ್ ಮೊದಲ ಸರಣಿ ಭಾರಿ ಯಶಸ್ಸು ಗಳಿಸಿದ್ದು, ಮುಂಬೈನ ಭೂಗತ ಜಗತ್ತು, ರಾಜಕೀಯ, ಧರ್ಮ ಎಲ್ಲದರ ಬಗ್ಗೆ ಕಥೆ ಹೇಳಿತ್ತು. ಸದ್ಯ ಸರಿ ಸುಮಾರು 100 ಕೋಟಿ ರು ಅಧಿಕ ಮೊತ್ತ ಹೂಡಿಕೆ ಮಾಡಿ ಎರಡನೇ ಸರಣಿಯನ್ನು ನೆಟ್ ಫ್ಲಿಕ್ ಬಿಡುಗಡೆ ಮಾಡಿತ್ತು. ಇನ್ನು ವಿಕ್ರಮ್ ಚಂದ್ರ ಎಂಬವರ ಕಾದಂಬರಿ ಆಧಾರಿತ ಕಥೆಯನ್ನು ಆಧರಿಸಿ ಸೇಕ್ರೆಡ್ ಗೇಮ್ ಸಿನಿಮಾವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಮೊದಲ ಸರಣಿಯಲ್ಲಿ ನಟಿಸಿದ್ದ ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ ಹಾಗೂ ರಾಧಿಕಾ ಅಪ್ಟೆ ಪ್ರಮುಖ ಪಾತ್ರಗಳಲ್ಲಿ ಎರಡನೇ ಸರಣಿಯಲ್ಲಿಯೂ ನಟಿಸಿದ್ದು, ಇವರೊಂದಿಗೆ ರಣವೀರ್ ಶೋರೆ ಹಾಗೂ ಕಲ್ಕಿ ಕೋಚ್ಲಿನ್ ಸೇರ್ಪಡೆಗೊಂಡಿದ್ದರು.
Leave a Reply
You must be logged in to post a comment.