ಬಹುಭಾಷಾ ನಟಿ ತಾಪ್ಸಿ ಪನ್ನು ನಟನೆಯ ಮಿಶನ್ ಮಂಡಲ್ ಈಗಾಗಲೇ ಬಿಡುಗಡೆಗೊಂಡು ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸುತ್ತಿದೆ. ಈ ಮಧ್ಯೆ ಮಿಷನ್ ಮಂಗಲ್ ನ ಟ್ರೇಲರ್ ಒಂದರಲ್ಲಿ ತಾಪ್ಸಿ ವ್ಯಕ್ತಿಯ ಗುಪ್ತಾಂಗ ಸ್ಪರ್ಶಿಸುವ ದೃಶ್ಯ ಬಿಡುಗಡೆಯಾಗಿದ್ದು, ಸಾಕಷ್ಟು ವಿವಾದಕ್ಕೀಡಾಗಿದೆ.
ಈ ಟ್ರೇಲರ್ ನಲ್ಲಿ ತಾಪ್ಸಿ ಪನ್ನು ವ್ಯಕ್ತಿಯೊಬ್ಬರ ಗುಪ್ತಾಂಗ ಸ್ಪರ್ಶಿಸುವ ದೃಶ್ಯದಲ್ಲಿ ನಟಿಸಿದ್ದಾರೆ. ಈ ದೃಶ್ಯವನ್ನು ಹಾಸ್ಯದ ದೃಷ್ಟಿಯಿಂದ ಮಾಡಿದ್ದರೂ ಕೂಡ ತಾಪ್ಸಿ ಪೇಚಿಗೆ ಸಿಲುಕುವಂತಾಗಿದೆ. ಚಿತ್ರದಲ್ಲಿ ತಾಪ್ಸಿ ಕಾರು ಕಲಿಯುವ ಸನ್ನಿವೇಶವೊಂದಿದೆ. ಈ ವೇಳೆ ಕಾರಿನ ಗೇರ್ ಬದಲಾಗಿ ಡ್ರೈವಿಂಗ್ ಟೀಚರ್ ಗುಪ್ತಾಂಗವನ್ನು ಹಿಡಿದುಕೊಳ್ಳುತ್ತಾಳೆ. ಈ ವೇಳೆ ಆತ ನೋವಿನಿಂದ ಕಿರುಚಿಕೊಳ್ಳುವ ದೃಶ್ಯ ಅದಾಗಿದೆ. ಸದ್ಯ ರಿಲೀಸ್ ಆಗಿರುವ ಮಿಷನ್ ಮಂಗಲ್ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. ತಾಪ್ಸಿ ನಟನೆ ಬಗ್ಗೆ ಸಾಕಷ್ಟ ಮಂದಿ ಟ್ರೋಲ್ ಮಾಡುತ್ತಿದ್ದು, ಈ ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.