ಈ ವಾರ ತೆರೆಗೆ ಬಂದಿರುವ ಸಿಂಗ ಮತ್ತು ಆದಿ ಲಕ್ಷ್ಮೀ ಪುರಾಣ ಎರಡೂ ಚಿತ್ರಗಳಲ್ಲಿ ಹೀರೋಗಳಿಗೆ ತಾಯಿಯಾಗಿ ನಟಿ ತಾರಾ ಅಭಿನಯಿಸಿದ್ದಾರೆ. ಒಂದರಲ್ಲಿ ಮಗನ ಮದುವೆ ಮಾಡಲು ಒದ್ದಾಡುವ ಸುಳ್ಳುಬುರುಕಿ ತಾಯಿಯಾಗಿ, ಸಿಂಗ ಸಿನಿಮಾದಲ್ಲಿ ಪರೋಪಕಾರಿ ಹೆಣ್ಣಾಗಿ ತಾರಮ್ಮ ಕಾಣಿಸಿಕೊಂಡಿದ್ದಾರೆ.

ತಾರಾ ಯಾವಾಗ ತಮಿಳು ತೆಲುಗು ಸೂಪರ್ ಸ್ಟಾರ್ ಗಳ ಸಿನಿಮಾಗಳಲ್ಲಿ ಮದರ್ ರೋಲು ಶುರು ಮಾಡಿದರೋ ಆಗಿಂದ ಕನ್ನಡ ಚಿತ್ರರಂಗ ಕೂಡಾ ಇವರನ್ನು ತಾಯಿ ಸ್ಥಾನದಲ್ಲಿ ಕೂರಿಸಿದೆ. ಒಂದು ಕಾಲದಲ್ಲಿ ಮಗಳಾಗಿ, ತಂಗಿಯಾಗಿ. ಮಡದಿಯಾಗಿ ಈಗ ತಾಯಿಯಾಗಿ…. ಕಾಲಕ್ಕೆ ತಕ್ಕಂತೆ, ಅನುಭವಕ್ಕೆ ಹೊಂದುವ ಪಾತ್ರ ಮಾಡುತ್ತಾ ಬಂದವರು ತಾರಾ ಮೇಡಮ್. ಈಗಾಗಲೇ ಮೂರು ತಲೆಮಾರಿನ ನಟರನ್ನು ಕಂಡಿರುವ ತಾರಾ ಕನಿಷ್ಠವೆಂದರೂ ಇನ್ನೂ ಮೂರು ಜನರೇಷನ್ನಿನ ಕಲಾವಿದರೊಂದಿಗೆ ನಟಿಸೋದು ನಿಜ. ಸದ್ಯ ತಾಯಿಯಾಗಿರುವ ತಾರಮ್ಮ ಮುಂದೆ ಅಜ್ಜಿ, ಮುತ್ತಜ್ಜಿ, ಕೋಲಜ್ಜಿಯಾಗಿಯೂ ಅವತಾರವೆತ್ತುವಂತಾಗಲಿ.

CG ARUN

ಅಸ್ಸಾಂ ನೆರೆ ಪರಿಹಾರಕ್ಕೆ ಕಿಲಾಡಿ ಅಕ್ಕಿ ಎರಡು ಕೋಟಿ!

Previous article

ಶೃತಿ ಹರಿಹರನ್ ಪ್ರೆಗ್ನೆನ್ಸಿ ಟ್ರೋಲಿಗೆ ಸಿಡಿದೆದ್ದ ಒಳ್ಳೆ ಹುಡ್ಗ ಪ್ರಥಮ್!

Next article

You may also like

Comments

Leave a reply

Your email address will not be published. Required fields are marked *