ಈ ಹಿಂದೆ ರಥಾವರ ಚಿತ್ರ ನಿರ್ದೇಶನ ಮಾಡಿದ್ದ ಚಂದ್ರಶೇಖರ ಬಂಡಿಯಪ್ಪರ ಹೊಸಾ ಚಿತ್ರ ತಾರಕಾಸುರ. ಈಗಾಗಲೇ ಭಿನ್ನವಾದ ಕಥೆಯೊಂದರ ಸುಳಿವಿನಿಂದ, ಎಂಥವರನ್ನೂ ಬೆರಗಾಗಿಸುವಂಥಾ ಪೋಸ್ಟರುಗಳಿಂದ ಈ ಚಿತ್ರ ಜನಮನ ಸೆಳೆದುಕೊಂಡಿದೆ. ಈ ಚಿತ್ರ ಈ ವಾರವೇ ತೆರೆ ಕಾಣಲಿದೆ.
ಈ ಚಿತ್ರದ ನಿರ್ಮಾಪಕರು. ಇವರ ಪುತ್ರ ವೈಭವ್ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ವೈಭವ್ ಥರ ಥರದ ಶೇಡುಗಳಿರೋ ಭಿನ್ನವಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದ್ಯಾವುದೋ ಲೇಖನವೊಂದನ್ನು ಓದುವಾಗ ನಶಿಸಿ ಹೋಗುತ್ತಿರೋ ವಿಶಷ್ಟ ಜಾನಪದ ಪ್ರಾಕಾರವೊಂದು ಬಂಡಿಯಪ್ಪನವರ ಕಣ್ಣಿಗೆ ಬಿದ್ದಿತ್ತು. ಎಂದಿನ ಕುತೂಹಲದಿಂದ ಅದರ ಬೆಂಬಿದ್ದವರಿಗೆ ಸಿಕ್ಕಿದ್ದು ವಿಸ್ಮಯಕರ ಮಾಹಿತಿ. ಇದರ ಮೂಲಕವೇ ತಾರಕಾಸುರ ಎಂಬ ಅಚ್ಚರಿಯ ಕಥೆಯೊಂದಕ್ಕೆ ಬಂಡಿಯಪ್ಪ ಜೀವ ತುಂಬಿದ್ದರು. ಈ ಹಿಂದೆ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ಜಗತ್ತನ್ನು ತೆರೆದಿಟ್ಟಿದ್ದರಲ್ಲಾ? ಅಂಥದ್ದೇ ರೋಚಕತೆಯೊಂದಿಗೆ ಈ ಚಿತ್ರದಲ್ಲಿ ಬುಡುಬುಡ್ಕೆ ಸಮುದಾಯದ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.
ಒಂದು ಸಮುದಾಯದ ಸುತ್ತಲಿನ ಕಥಾ ಹಂದರ ಹೊಂದಿದ್ದರೂ ತಾರಕಾಸುರ ಪಕ್ಕಾ ಕಮರ್ಶಿಯಲ್ ಚಿತ್ರ. ಹಾಲಿವುಡ್ನ ಖ್ಯಾತ ನಟ ಡ್ಯಾನಿ ಸಫಾನಿ ಈ ಚಿತ್ರದಲ್ಲಿ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಅದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದಾಗಿದೆ. ಇದೂ ಸೇರಿದಂತೆ ತಾರಕಾಸುರನ ಬಗ್ಗೆ ಇಂಥಾದ್ದೊಂದು ಕೌತುಕ ಹುಟ್ಟಿಕೊಳ್ಳಲು ನಾನಾ ಕಾರಣಗಳಿವೆ.
#
No Comment! Be the first one.