ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದ ತವಸಿಯ ಮನೆಯವರು ಮಧುರೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸರ್ಕಾರಿ ದವಾಖಾನೆಗಳ ವ್ಯವಸ್ಥೆಗೆ ಯಾವ ನಟನಾದರೇನು? ನಾಯಕನಾದರೇನು? ನೋಟು ಕೊಟ್ಟರೆ ಮಾತ್ರ ಟ್ರೀಟ್ಮೆಂಟು ಎನ್ನುವಂಥಾ ರೂಲ್ಸು!
ಕನ್ನಡ ಚಿತ್ರರಂಗದಲ್ಲಿ ಎಷ್ಟೋ ಜನ ಪೋಷಕ ಕಲಾವಿದರು ಅನಾರೋಗ್ಯಗಳಿಗೆ ತುತ್ತಾಗಿ ದಿಕ್ಕಿಲ್ಲದ ಸ್ಥಿತಿಯಲ್ಲಿದ್ದಾರೆ. ಸಾಕಷ್ಟು ಜನ ಸಂಕಷ್ಟಗಳನ್ನು ಅನುಭವಿಸಿ ಆಸ್ಪತ್ರೆ ಖರ್ಚಿಗೂ ದುಡ್ಡಿಲ್ಲದೇ ಜೀವ ಬಿಟ್ಟಿದ್ದಾರೆ. ಈವತ್ತಿಗೂ ಅನೇಕ ಹಿರಿಯ ಕಲಾವಿದರು, ತಂತ್ರಜ್ಞರು, ದೊಡ್ಡ ಸಾಧಕರೆನಿಸಿಕೊಂಡವರು ತೀರಾ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ʻʻಕನ್ನಡ ಸಿನಿಮಾ ರಂಗವೇ ಹೀಗೆ ನೆರೆಯ ಭಾಷೆಗಳ ಕಲಾವಿದರು ಇಂಥಾ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿಯೇ ಇಲ್ಲ” ಎನ್ನುವಂಥ ಮಾತುಗಳೂ ಕೇಳಿಬರುತ್ತವೆ. ಆದರೆ ಅಲ್ಲಿಯೂ ಇಂಥದ್ದೇ ಹೀನ ಸ್ಥಿತಿ ಇದೆ ಅನ್ನೋದಕ್ಕೆ ಜ್ವಲಂತ ಉದಾಹರಣೆಯೊಂದು ಕಣ್ಣೆದುರಿಗೇ ತೆರೆದುಕೊಂಡಿದೆ.
ತಮಿಳಿನ ಬಹಳಷ್ಟು ಸಿನಿಮಾಗಳಲ್ಲಿ ಮಂತ್ರವಾದಿ, ದೈವಭಕ್ತ, ಹಳ್ಳಿ ಪೂಜಾರಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ದೊಡ್ಡ ಮೀಸೆಯ ಈತನ ಹೆಸರು ತವಸಿ. ಬಹುತೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ಈತ ಪಾತ್ರ ನಿರ್ವಹಿಸಿದ್ದಾನೆ. ಕಾಮಿಡಿ, ಸೀರಿಯಸ್ಸು, ವಿಲನ್ನು – ಯಾವ ಪಾತ್ರವನ್ನೇ ಕೊಟ್ಟರೂ ಮೈಮನಗಳನ್ನು ಆವರಿಸಿಕೊಳ್ಳುವ ತವಸಿ ಈವರೆಗೆ ನೂರಾನಲವತ್ತಾರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಣ್ಣದೊಂದು ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿದ ತವಸಿ ಒಂದಿಷ್ಟು ಟೆಸ್ಟುಗಳನ್ನು ಮಾಡಿಸಬೇಕಾಯಿತು. ಆಗ ಈತನ ದೇಹದಲ್ಲಿ ಅದಾಗಲೇ ಕ್ಯಾನ್ಸರ್ ಕಾಯಿಲೆ ಮನೆಮಾಡಿರುವ ಅಘಾತಕಾರಿ ಅಂಶ ಪತ್ತೆಯಾಗಿತ್ತು.
ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದ ತವಸಿಯ ಮನೆಯವರು ಮಧುರೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸರ್ಕಾರಿ ದವಾಖಾನೆಗಳ ವ್ಯವಸ್ಥೆಗೆ ಯಾವ ನಟನಾದರೇನು? ನಾಯಕನಾದರೇನು? ನೋಟು ಕೊಟ್ಟರೆ ಮಾತ್ರ ಟ್ರೀಟ್ಮೆಂಟು ಎನ್ನುವಂಥಾ ರೂಲ್ಸು! ಹೆಚ್ಚೂಕಮ್ಮಿ ಜೀವ ತೊರೆಯುವ ಹಂತದಲ್ಲಿದ್ದ ತವಸಿಯ ಬಗ್ಗೆ ಚಿತ್ರನಿರ್ದೇಶಕರೇ ಗಮನ ಹರಿಸಿದ್ದರು. ಮಧುರೈನ ಡಾ. ಸರವಣನ್ ಎನ್ನುವವರನ್ನು ಪರಿವರ್ತಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಿದರು.
ಈ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೇ ಸೂಪರ್ ಸ್ಟಾರ್ ರಜಿನಿ ತಮ್ಮ ಸಂಸ್ಥೆಯ ವತಿಯಿಂದ ಒಂದಿಷ್ಟು ಹಣದ ವ್ಯವಸ್ಥೆ ಮಾಡಿದರು. ನಂತರ ವಿಜಯ್ ಸೇತುಪತಿ, ಸಿಂಬು ತಲಾ ಒಂದು ಲಕ್ಷಗಳನ್ನು, ಶಿವಕಾರ್ತಿಕೇಯನ್ ಮತ್ತು ಕಆಮಿಡಿ ನಟ ಪರೋಟಾ ಸೂರಿ ೨೫-೨೫ ಸಾವಿರ ಹಣವನ್ನು ತವಸಿಯ ಚಿಕಿತ್ಸೆಯ ವೆಚ್ಚಕ್ಕೆಂದು ನೀಡಿದ್ದರು. ತವಸಿ ಪ್ರಾಣಾಪಾಯದಿಂದ ಪಾರಾಗುತ್ತಿದ್ದಾರೆ ಅನ್ನುವಷ್ಟರಲ್ಲಿ ನವೆಂಬರ್ 23ರಂದು ತವಸಿ ಕೊನೆಯುಸಿರೆಳದರು…
No Comment! Be the first one.