ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರವೀಗ ಹಾಡುಗಳ ಹಂಗಾಮದಿಂದ ಮತ್ತಷ್ಟು ಪ್ರೇಕ್ಷಕರನ್ನು ತಲುಪಲಾರಂಭಿಸಿದೆ. ಅಜೇಯ್ ರಾವ್ ಹೊಸಾ ಗೆಟಪ್ಪಿನಲ್ಲಿ ನಟಿಸಿರೋ, ಜೂಡಾ ಸ್ಯಾಂಡಿ ಸಂಗೀತ ನೀಡಿರುವ ಈ ಚಿತ್ರದ ಮತ್ತೊಂದು ಹಾಡೀಗ ಬಿಡುಗಡೆಗೊಂಡಿದೆ.
ಈಗ ಬಿಡುಗಡೆಯಾಗಿರೋ ಅಮ್ಮ ನಿನ್ನ ಮಗನೆಂಬ ಹೆಮ್ಮೆ.. ಅಮ್ಮ ನಿನ್ನ ಮಡಿಲಲ್ಲಿ ಜಾಗ ನೀಡು ನನಗೆ ಪ್ರತಿ ಜನ್ಮಕೂ… ಎಂಬ ಈ ಹಾಡೂ ಈ ಹಿಂದಿನ ಎರಡು ಹಾಡುಗಳನ್ನೇ ಮೀರಿಸುವಂತೆ ಹಿಟ್ ಆಗೋ ಸೂಚನೆಯೂ ದಟ್ಟವಾಗಿಯೇ ಕಾಣಿಸುತ್ತಿದೆ. ಅಮ್ಮನ ಮೇಲಿನ ಪ್ರೀತಿಯ ಪ್ರತೀಕದಂತಿರೋ ಈ ಹಾಡಿನ ಸಾಲುಗಳು ಭಾವಗೀತೆಯಂಥಾ ನವಿರುತನದಿಂದ ಎಲ್ಲರನ್ನು ಆವರಿಸಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.
ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಹೃದಯಕೆ ಹೆದರಿಕೆ ನೀ ಹೀಗೆ ನೋಡಿದರೆ ಎಂಬ ಹಾಡೂ ಟ್ರೆಂಡಿಂಗ್ನಲ್ಲಿದೆ. ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಿ ಪ್ರೇಕ್ಷಕರಿಗೆ ಸರ್ಪ್ರೈಸ್ ಕೊಡುತ್ತಾ ಬಂದಿರೋ ಚಿತ್ರತಂಡ, ಆ ಹಾಡುಗಳನ್ನು ಒಂದಕ್ಕಿಂತ ಒಂದು ಚೆಂದ ಎಂಬಂತೆ ರೂಪಿಸುತ್ತಿರೋದು ವಿಶೇಷ.
https://www.youtube.com/watch?v=uCrUZoh_gqQ&feature=youtu.be #