ಶಶಾಂಕ್ ನಿರ್ಮಾಣ ಮಾಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರೋ ತಾಯಿಗೆ ತಕ್ಕ ಮಗ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಇದು ಶಶಾಂಕ್ ಮತ್ತು ಅಜೇಯ್ ಕಾಂಬಿನೇಷನ್ನಿನ ಮೂರನೇ ಚಿತ್ರ. ಅಜೇಯ್ ವೃತ್ತಿ ಜೀವನದಲ್ಲಿ ಇಪ್ಪತೈದನೇ ಚಿತ್ರವೂ ಹೌದು.
ಲವರ್ ಬಾಯ್ ಗೆಟಪ್ಪಿನಲ್ಲಿಯೇ ಹದಿನೈದು ವರ್ಷದಿಂದೀಚೆಗೆ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದವರು ಅಜೇಯ್ ರಾವ್. ಇಪ್ಪತೈದನೇ ಚಿತ್ರವಾದ ತಾಯಿಗೆ ತಕ್ಕ ಮಗದಲ್ಲಿ ಅವರು ಈವರೆಗಿನ ಎಲ್ಲ ಚಿತ್ರಗಳಿಗಿಂತಲೂ ಬೇರೆಯದ್ದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರಿನಲ್ಲಿಯೂ ಮಾಸ್ ಲುಕ್ಕಿನಲ್ಲಿಯೇ ಮಿಂಚಿದ್ದಾರೆ. ಈಗಾಗಲೇ ಹಾಡುಗಳು ಸೇರಿದಂತೆ ನಾನಾ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಈ ಚಿತ್ರ ಈ ವಾರ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ.
ಅಜೇಯ್ ರಾವ್ ಪಾಲಿಗೆ ಆಕ್ಷನ್ ಚಿತ್ರಗಳೆಂದರೆ ಆರಂಭದಿಂದಲೂ ಆಸಕ್ತಿ ಹೆಚ್ಚಾಗಿತ್ತು. ಆದರೆ ಚಿತ್ರರಂಗದಲ್ಲಿ ಅವರು ನೆಲೆ ಕಂಡುಕೊಂಡಿದ್ದು ಮಾತ್ರ ಅದಕ್ಕೆ ತದ್ವಿರುದ್ಧವಾದ ಪಾತ್ರಗಳಲ್ಲಿಯೇ. ಅಜೇಯ್ ಶಾಲಾ ದಿನಗಳಲ್ಲಿಯೇ ಕರಾಟೆ ಪಟುವಾಗಿದ್ದವರು. ಆದರೆ ಅದರ ಪ್ರದರ್ಶನಕ್ಕೆ ಚಿತ್ರಗಳಲ್ಲಿ ಅವಕಾಶ ಸಿಕ್ಕಿದ್ದಿಲ್ಲ. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ತಮ್ಮೊಳಗಿನ ಕಲೆಗೆ ತಕ್ಕ ಅವಕಾಶ ಸಿಕ್ಕಿದೆ ಎಂಬುದು ಅಜೇಯ್ ಖುಷಿಗೆ ಕಾರಣ.
ಇನ್ನುಳಿದಂತೆ ನಿಜ ಜೀವನದಲ್ಲಿಯೂ ಅಜೇಯ್ ರಾವ್ ತಾಯಿಯ ಪ್ರೀತಿಯ ಮಗ. ಅಮ್ಮ ಅಂದರೆ ಅವರ ಜಗತ್ತು. ಈ ಬಗ್ಗೆ ಅತೀವವಾದ ಭಾವುಕತೆ ಇಟ್ಟುಕೊಂಡಿರೋ ಅವರಿಗೆ ತಮ್ಮ ಇಪ್ಪತೈದನೇ ಚಿತ್ರಕ್ಕೆ ತಾಯಿಗೆ ತಕ್ಕ ಮಗನೆಂಬ ಶೀರ್ಷಿಕೆ ಸಿಕ್ಕಿದ್ದೇ ಮಹಾ ಸಂತಸ. ಈ ಚಿತ್ರಕ್ಕಾಗಿ ತಾನು ಪಟ್ಟಿರೋ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಮತ್ತು ಈ ಹದಿನೈದು ವರ್ಷಗಳ ಹಾದಿ ಸಾರ್ಥಕವಾಗುತ್ತದೆ ಎಂಬ ಭರವಸೆ ಅವರಲ್ಲಿದೆ.
#
No Comment! Be the first one.