ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’ ಸಿನಿಮಾದ ಟ್ರೇಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಈ ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಅಷ್ಟೇ ಅಲ್ಲ ಟ್ರೇಲರ್ ನೋಡಿ ಮನಸಾರೆ ನಕ್ಕು ಖುಷಿಯಿಂದ ಸಿನಿಮಾ ಬಗ್ಗೆ ಮಾತನಾಡಿದ್ದರು. ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸುತ್ತಿರುವ ‘ತೋತಾಪುರಿ’ ಟ್ರೇಲರ್ ಸ್ಯಾಂಡಲ್’ವುಡ್ ಸೇರಿದಂತೆ ದೇಶ-ವಿದೇಶಗಳಿಂದ ಬರುತ್ತಿರುವ ರೆಸ್ಪಾನ್ಸ್‌ ಕಂಡು ಚಿತ್ರತಂಡ ಸಖತ್ ಖುಷಿಯಾಗಿದೆ.

ಕರ್ನಾಟಕ ಸೇರಿದಂತೆ ಪಕ್ಕದ ರಾಜ್ಯಗಳು, ದೇಶಗಳಲೆಲ್ಲಾ ‘ತೋತಾಪುರಿ’ ಘಮಘಮಿಸುತ್ತಿದೆ. ಅಮೆರಿಕಾ, ಆಸ್ಟ್ರೇಲಿಯಾ, ದುಬೈ, ಲಂಡನ್‌, ಉಗಾಂಡ, ಫಿಲಿಪೈನ್ಸ್ ಸೇರಿದಂತೆ ಸಾಕಷ್ಟು ರಾಷ್ಟ್ರಗಳಿಂದ ‘ತೋತಾಪುರಿ’ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಚಗುಳಿಯಿಡುವ ಕಾಮಿಡಿ, ಮೈ ನವಿರೇಳಿಸುವ ದೃಶ್ಯ ಹಾಗೂ ಪಂಚಿಂಗ್ ಡೈಲಾಗ್ಸ್ ಕಂಡು ‘ಇದು ಕಾಶ್ಮೀರ್ ಫೈಲ್ಸ್ ಅಲ್ಲ, ದೇಸಿ ಫೈಲ್ಸ್’  ಎಂದು ನೋಡುಗರು ಅನಿಸಿಕೆ ವ್ಯಕ್ತಪಡಿಸುತ್ತಿರೋದು ಚಿತ್ರತಂಡದ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಹಿಟ್ಸ್ ದಾಖಲಿಸಿ ಯೂ ಟ್ಯೂಬ್’ನಲ್ಲಿ ಟ್ರೆಂಡಿಂಗ್’ನಲ್ಲಿರೋದು ತೋತಾಪುರಿ ಹೆಚ್ಚುಗಾರಿಕೆ. ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಹಿಟ್ ಆಗಿದ್ದು, ಈಗ ಟ್ರೇಲರ್ ಸಹ ಸಖತ್ ಕಮಾಲ್ ಮಾಡುತ್ತಿದೆ. ಕೆ.ಎ.ಸುರೇಶ್ ನಿರ್ಮಾಣದ ಈ ಸಿನಿಮಾವನ್ನು ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿದೆ. ಸದ್ಯದಲ್ಲೇ ತೆರೆಕಾಣಲಿರುವ ಈ ಚಿತ್ರದಲ್ಲಿ ‘ಡಾಲಿ’ ಧನಂಜಯ್’, ಸುಮನ್ ರಂಗನಾಥ್, ಅದಿತಿ ಪ್ರಭುದೇವ ಹಾಗೂ ದತ್ತಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬಹು ನಿರೀಕ್ಷಿತ “ಹೆಡ್ ಬುಷ್” ಚಿತ್ರದ ಚಿತ್ರೀಕರಣ ಪೂರ್ಣ.

Previous article

ಧೀರನ್ ಫಸ್ಟ್ ಲುಕ್ ಸಿಂಪಲ್ ಸುನಿ ಬಿಡುಗಡೆ

Next article

You may also like

Comments

Leave a reply

Your email address will not be published. Required fields are marked *