ಫ಼್ಯೂಚರ್ ಎಂಟರ್ಟೈನ್ಮೆಂಟ್ ನಿರ್ಮಾಣದ ‘ತ್ರಯಂಬಕಂ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಫ಼ೆಭ್ರವರಿ ೨೩ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ರಾಘವೇಂದ್ರ ರಾಜಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಟ್ರೇಲರನ್ನು ಪವರ್ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಲಿದ್ದಾರೆ.
ದಯಾಳ್ ಪದ್ಮನಾಭನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ರಾಘವೇಂದ್ರ ರಾಜಕುಮಾರ್, ರೋಹಿತ್, ಅನುಪಮ ಗೌಡ ಇದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಗಣೇಶ್ ನಾರಾಯಣನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಬಿ.ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನ ಹಾಗೂ ವೆಂಕಟ್ ದೇವ್ ಅವರ ಸಹ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಫಣೀಶ್ ರಾಜ, ಸಂತೋಷ್ ನಾಯಕ್, ಅಭಿ ಕನಸಿನ ಕವನ ರಚಿಸಿದ್ದಾರೆ. ಸಂಭಾಷಣೆಯನ್ನು ನವೀನ್ಕೃಷ್ಣ ಬರೆದಿದ್ದಾರೆ.
#