ಎಕ್ಸ್ಕ್ಯೂಸ್ ಮಿ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ ಸುನೀಲ್ ರಾವ್ ಹಲವು ವರ್ಷಗಳ ನಂತರ ‘ತುರ್ತು ನಿರ್ಗಮನ‘ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಈ ಚಿತ್ರದ ಮುಖ್ಯಪಾತ್ರದಲ್ಲಿ ಸುನೀಲ್ ರಾವ್ ಅಭಿನಯಿಸಿದ್ದಾರೆ.
ಕುಮಾರ್ & ಕುಮಾರ್ ಫ಼ಿಲಂಸ್ ಲಾಂಛನದಲ್ಲಿ, ಶೈಲಜಾ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ಭರತ್ ಕುಮಾರ್, ಹೇಮಂತ್ ಕುಮಾರ್ ಅವರು ನಿರ್ಮಿಸುತ್ತಿರುವ ‘ತುರ್ತು ನಿರ್ಗಮನ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸದ್ಯ ಚಿತ್ರಕ್ಕೆ visual effects ಕೊಚ್ಚಿನ್ನ ಸೂತ್ರ ಎಂಬ ಸ್ಟುಡಿಯೋದಲ್ಲಿ ಹಾಗೂ ಸೌಂಡ್ ಡಿಸೈನ್ ಮುಂಬೈನ ಔರಲ್ ಮೇಹಮ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಫ಼್ಯಾಂಟಸಿ ಹಾಗೂ ಕಾಲ್ಪನಿಕ ಕಥಾ ಹಂದರ ಹೊಂದಿರುವ ಈ ಚಿತ್ರ ಫ಼ೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲವಾರದಲ್ಲಿ ತೆರೆಗೆ ಬರಲಿದೆ. ಶರತ್ ಭಗವಾನ್ ಈ ಚಿತ್ರದ ಸಹ ನಿರ್ಮಾಪಕರು.
ಹೇಮಂತ್ ಕುಮಾರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದಲ್ಲಿ ೬ ಹಾಡುಗಳಿದ್ದು, ಧೀರೇಂದ್ರ ದಾಸ್ ಸಂಗೀತ ನೀಡಿದ್ದಾರೆ. ಸದ್ಯದಲ್ಲೇ ಆಡಿಯೋ ರಿಲೀಸ್ ಆಗಲಿದೆ. ಪ್ರಯಾಗ್ ಮುಕುಂದನ್ ಛಾಯಾಗ್ರಹಣ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಅಜಿತ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಹಿಂದೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು‘ ಚಿತ್ರದಲ್ಲಿ ಹೇಮಂತ್ ರಾವ್ ಜೊತೆ sಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ ಹೇಮಂತ್ ಕುಮಾರ್ ಅವರಿಗೆ ಇದು ಚೊಚ್ಚಲ ಚಿತ್ರ. ಸುನೀಲ್ ರಾವ್, ರಾಜ್ ಬಿ ಶೆಟ್ಟಿ, ಅಚ್ಯುತಕುಮಾರ್, ಸುಧಾರಾಣಿ, ಸಂಯುಕ್ತ ಹೆಗ್ಡೆ, ಹಿತ ಚಂದ್ರಶೇಖರ್, ಅಮೃತ ರಾಮಮೂರ್ತಿ, ನಾಗೇಂದ್ರ ಶಾ, ಅರುಣ ಬಾಲರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.