ಸೆಲೆಬ್ರೆಟಿಗಳು ಫ್ರೀ ಬಿಟ್ಟರೂ ಎಂದ ಮಾತ್ರಕ್ಕೆ ಇಲ್ಲಸಲ್ಲದ ಬಾಯಿಗೆ ಬಂದ ಪ್ರಶ್ನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳುವುದು, ಉತ್ತರಿಸುವುದು ಮಾನ ಹರಣದ ವಿಚಾರ ಜತೆಗೆ ಮುಜುಗರ ತರುವ ಸಂಗತಿ ಕೂಡ. ಕೆಲವೊಮ್ಮೆ ಸೆಲೆಬ್ರೆಟಿಗಳು ಇಂತಹ ಪ್ರಶ್ನೆಗಳಿಗೆ ಉತ್ತರಿಸದೇ ಮೌನವನ್ನು ತಾಳಿದರೆ ಇನ್ನೂ ಕೆಲವು ಸಂದರ್ಭಗಳಲ್ಲಿ ಖಾರವಾಗಿಯೇ ಪ್ರತಿಕ್ರಿಯಿಸಿಬಿಡುತ್ತಾರೆ. ಸದ್ಯ ಇಂತಹುದೇ ಪ್ರಶ್ನೆಯೊಂದನ್ನು ಅಭಿಮಾನಿಯೊಬ್ಬ ಬಾಲಿವುಡ್ ನಟ ಟೈಗರ್ ಶ್ರಾಫ್ ಗೆ ಕೇಳಿದ್ದು, ಅಭಿಮಾನಿಯ ಪ್ರಶ್ನೆಗೆ ಹುರಿದುಬಿದ್ದಿದ್ದಲ್ಲದೇ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಟೈಗರ್ ಶ್ರಾಪ್ ಇನ್ಸ್ಟಾಗ್ರಾಂನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ಹಮ್ಮಿಕೊಂಡಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ನೀವು ಏನು ಬೇಕಾದರೂ ಕೇಳಬಹುದು ಎಂದು ಹೇಳಿದ್ದರು. ಸಾಕಷ್ಟು ಅಭಿಮಾನಿಗಳು ವೈಯಕ್ತಿಕ ಬದುಕಿಗೆ ಸಂಭಂದಿಸಿದ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಅಭಿಮಾನಿಯೊಬ್ಬ ನೀವು ವರ್ಜಿನ್ ಹೌದಾ? ಅಲ್ಲವಾ? ಎಂಬ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಟೈಗರ್ ಶ್ರಾಫ್ ” ಅಯ್ಯೋ ನಾಚಿಕೆ ಇಲ್ಲದವನೆ! ನಮ್ಮ ತಂದೆ ತಾಯಿ ಕೂಡ ನನ್ನನ್ನು ಫಾಲೋ ಮಾಡುತ್ತಿದ್ದಾರೆ’ ಈ ಪ್ರಶ್ನೆಗೆ ಉತ್ತರ ಕೊಟ್ಟರೆ ಅವರಿಗೂ ಗೊತ್ತಾಗಲ್ಲವೇ ಎಂದಿದ್ದಾರೆ.
No Comment! Be the first one.