ಟಾಲಿವುಡ್ ಧಾರವಾಹಿ ನಟಿಯೊಬ್ಬಳು ನಾಪತ್ತೆಯಾಗಿರುವ ಹಿನ್ನೆಲೆ ಆಕೆಯ ಪೋಷಕರು ಸಂಜೀವರೆಡ್ಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಪತ್ತೆಯಾದ ನಟಿಯನ್ನು ಲಲಿತಾ ಎಂದು ಗುರುತಿಸಲಾಗಿದ್ದು, ಈಕೆ ಕಳೆದ ಒಂದು ವರ್ಷದಿಂದ ಎಸ್.ಆರ್. ನಗರದ ಹಾಸ್ಟೆಲ್ ಒಂದರಲ್ಲಿ ಉಳಿದುಕೊಳ್ಳುತ್ತಿದ್ದು ಜೂನ್ 17ರಿಂದ ಮೊಬೈಲ್ ಗೂ ಸಿಗದೆ ನಾಪತ್ತೆಯಾಗಿದ್ದಾರೆ.
ಎಸ್. ಆರ್. ನಗರ ಪೊಲೀಸರು ಮಾತನಾಡಿ, `ಲಲಿತಾ ಅವರು ಕಳೆದ ಒಂದು ವರ್ಷದಿಂದ ಎಸ್ ಆರ್ ನಗರದ ಹಾಸ್ಟೆಲ್ ವೊಂದರಲ್ಲಿ ಉಳಿದುಕೊಳ್ಳುತ್ತಿದ್ದರು. ಆಕೆಯ ಪೋಷಕರು ಜೂನ್.17ರಂದು ಸಂಪರ್ಕ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಮೊಬೈಲ್ ನೆಟ್ ವರ್ಕ್ ಗೂ ಸಿಗದೆ ನಾಪತ್ತೆಯಾಗಿದ್ದಾರೆ. ಸಂಶಯಗೊಂಡ ಪೋಷಕರು ಹೈದಾರಾಬಾದ್ ಗೆ ಬಂದಿದ್ದಾರೆ. ಆದರೆ ಅಲ್ಲೂ ಇರದೆ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
Comments