ಇತ್ತೀಚಿಗೆ ರಿಲೀಸ್ ಆಗಿ ಸಕ್ಸಸ್ ಫುಲ್ ಪ್ರದರ್ಶನ ಕಾಣುತ್ತಿರುವ ವೆಲ್ಳಾಯ್ ಪೂಕಲ್ ಸಿನಿಮಾದಲ್ಲಿ ನಟಿಸಿರುವ ವಿವೇಕ್ ರನ್ನು ನಿರ್ದೇಶಕ ಚೆರನ್ ಪ್ರಶಂಶಿಸಿದ್ದಾರೆ. ಈ ಸಿನಿಮಾವನ್ನು ವಿವೇಕ್ ಇಳಂಗೋವನ್ ನಿರ್ದೇಶನ ಮಾಡಿದ್ದು, ಇಂಡಸ್ ಕ್ರಿಯೇಷನ್ಸ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಈ ಸಿನಿಮಾ ಕಳೆದ ಏಪ್ರಿಲ್ 19 ರಿಲೀಸ್ ಭಾಗ್ಯ ಕಂಡು ಕಾಂಚನ 3 ಮುಂದೆ ಅಭೂತಪೂರ್ವ ಯಶಸ್ಸನ್ನು ಕಾಣುತ್ತಿದೆ. ಸಿನಿಮಾದ ಕುರಿತಾಗಿ ಸಕಾರಾತ್ಮಕ ವಿಮರ್ಶೆಗಳು ವ್ಯಕ್ತವಾಗುತ್ತಿದೆ. ಈಗಾಗಲೇ ನಟ ಮಾಧವನ್, ನಿರ್ದೇಶಕರುಗಳಾದ ಸಸಿಕುಮಾರ್, ಕಾರ್ತಿಕ್ ಸುಬ್ಬರಾಜ್ ಮತ್ತು ಚೆರನ್ ರವರು ಸಿನಿಮಾ ನೋಡಿ ವಿವೇಕ್ ರನ್ನು ಅಭಿನಂದಿಸಿದ್ದಾರೆ. ವಿವೇಕ ತನ್ನನ್ನು ಅಭಿನಂದಿಸಿದ ಎಲ್ಲರಿಗೂ ಟ್ವಿಟರ್ ಮೂಲಕ ಧನ್ಯವಾದವನ್ನು ತಿಳಿಸಿದ್ದಾರೆ.