ಕೆ ಜಿ ಎಫ್ ಚಿತ್ರಕ್ಕೆ ಸಂಭಾಷಣೆ ರಚಿಸಿ ʻಮಾತಿನ ಮಾಂತ್ರಿಕʼ ಎನಿಸಿಕೊಂಡಿರುವ ರಾಘವ್ ವಿನಯ್ ಶಿವಗಂಗೆ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರಿವಿದು. ಜೀವನದ ಏರಿಳಿತಗಳ ನಡುವೆ ಸಾಗುವ ಮಧ್ಯಮ ವರ್ಗದ ಜನರ ಬದುಕನ್ನ ಜೀವಿಸಿ, ವಿಮರ್ಶಿಸಿ ಅತ್ಯಂತ ಕಾಳಜಿಯಿಂದ ಕಥೆ-ಚಿತ್ರಕಥೆ ರಚಿಸಿ, ಸಿನಿಮಾ ರಸಿಕರಿಗಾಗಿ ಟಾಮ್ ಅಂಡ್ ಜೆರ್ರಿ ಚಿತ್ರವನ್ನು ಕಟ್ಟಿಕೊಡಲಾಗಿದೆ.

ಇತ್ತ ನಿರ್ಮಾಪಕರು ತಮ್ಮ ಚೊಚ್ಚಲ ಕೈಗೂಸಾದ ಟಾಮ್ ಅಂಡ್ ಜೆರ್ರಿ ಸಿನಿಮಾದ ತಂತ್ರಜ್ಞರಿಗೆ, ಕಲಾವಿದರಿಗೆ ಸಕಲ ಸೌಲಭ್ಯ, ಸೌಕರ್ಯಗಳನ್ನು ಕಲ್ಪಿಸುವುದರ ಮೂಲಕ ಚಿತ್ರದ ಉತ್ಕೃಷ್ಟತೆಗೆ ನೇರ ಕಾರಣರಾಗಿದ್ದಾರೆ. ಬಹು ನಿರೀಕ್ಷೆ ಮೂಡಿಸಿರುವ ಯುವ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ಟಾಮ್ ಅಂಡ್ ಜೆರ್ರಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ “ಹಾಯಾಗಿದೆ ಎದೆಯೊಳಗೆ” ಎಂಬ ಹಾಡನ್ನು ಪ್ರಖ್ಯಾತ ಹಿನ್ನೆಲೆ ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ.

ಈ ಕಾರಣಕ್ಕೆ ಟಾಮ್ ಅಂಡ್ ಜೆರ್ರಿ ಸಿನಿಮಾ ಬಗ್ಗೆ  ಇಡೀ ಸೌತ್ ಇಂಡಿಯಾದಲ್ಲಿ ಕುತೂಹಲ ಮೂಡಿದೆ. ಸಿದ್ ಶ್ರೀ ರಾಮ್ಗೆ ಕನ್ನಡದಲ್ಲಿ ಹಾಡುವಂತಾ ಈತನಕ ಸಾಕಷ್ಟು ಆಫರ್ ಗಳು ಬಂದಿದ್ದವು. ಕನ್ನಡ ಭಾಷೆಗಾಗಿ ಹಾಡುವ ಮೊದಲ ಹಾಡು ಹೀಗೇ ಇರಬೇಕು ಎಂದು ಕಾದಿದ್ದ ಶ್ರೀರಾಮ್ ಕಡೆಗೂ “ಟಾಮ್ ಅಂಡ್ ಜೆರ್ರಿʼ ಸಂಗೀತ ಮತ್ತು ಸಾಹಿತ್ಯಕ್ಕೆ ಮನಸೋತು ಹಾಡಲು ಒಪ್ಪಿ, ರೆಕಾರ್ಡಿಂಗ್ ಸಹಾ ಮುಗಿಸಿದ್ದಾರೆ. ಇಷ್ಟೇ ಅಲ್ಲದೆ ಈ ಸಿನಿಮಾ “ಬ್ಲಾಕ್ ಬಸ್ಟರ್“ ಆಗಲಿದೆ, ಸಿನಿಮಾ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದ್ದು, ಕಂಪೋಸರ್ ಮ್ಯಾಥ್ಯೂಸ್ ಮನು ರವರನ್ನು “ಮೆಲೋಡಿ ಕಿಲ್ಲರ್” ಎಂದು ಪ್ರಶಂಸಿಸಿ, ಚಿತ್ರ ತಂಡದ ಎಲ್ಲರಿಗೂ ಶುಭ ಕೋರಿದ್ದಾರೆ.

ಇನ್ನು ಈ ಸಿನಿಮಾಗೆ ಛಾಯಾಗ್ರಾಹಕರಾಗಿ ಸಂಕೇತ್ ಕಾರ್ಯ ನಿರ್ವಹಿಸಿದ್ದರೆ, ಚಿತ್ರಕ್ಕೆ ಸೂರಜ್ ಅಂಕೋಲೆಕರ್ ಅವರ ಸಂಕಲನವಿದೆ. ಸಾಹಸ ನಿರ್ದೇಶಕರಾಗಿ ಅರ್ಜುನ್ ರಾಜ್ ಕಾರ್ಯ ನಿರ್ವಹಿಸಿದ್ದರೆ, ನೃತ್ಯ ಸಂಯೋಜಕರಾಗಿ ರಾಜ್ ಕಿಶೋರ್ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಹಿರಿಯ ಕಲಾವಿದರಾದ ಜೈ ಜಗದೀಶ್, ತಾರಾ ಅನುರಾಧ, ರಾಕ್ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಸೇರಿದಂತೆ ಕವಲು ದಾರಿ ಖ್ಯಾತಿಯ ಸಂಪತ್ ಮೈತ್ರೇಯ, ಕೆ ಜಿ ಎಫ್ ಖ್ಯಾತಿಯ ೨ ಶೇಖರ್ ಮತ್ತು ಮುಂತಾದ ಕಲಾವಿದರ ದಂಡೇ ಇದೆ. ನಿಶ್ಚಿತ್ ಕರೋಡಿ ಹಾಗೂ ಚೈತ್ರ ರಾವ್ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ.

ಇನ್ನು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾದ ವಿನಯ್ ಚಂದ್ರ ಅವರ ಕೊಡುಗೆ ಅಪಾರ. ಚಿತ್ರದ ಪ್ರತಿ ಹಂತದಲ್ಲು ತಮ್ಮ ಅದ್ಭುತ ಕಾರ್ಯ ನಿರ್ವಹಣೆಯ ಮೂಲಕ ಸಿನಿಮಾ ಅಮೋಘವಾಗಿ ಮೂಡಿ ಬರಲು ನೆರವಾಗಿದ್ದಾರೆ. ಹೆಸರಾಂತ ಉದ್ಯಮಿಯಾದ ರಾಜು ಶೇರಿಗಾರ್ ಅವರು ಕನ್ನಡ ಅಭಿಮಾನ ಮತ್ತು ಕಲೆಯ ಮೇಲಿನ ವಿಶೇಷ ಒಲವು, ಕಾಳಜಿಯಿಂದ ನಿರ್ಮಿಸಿರುವ ಮೊದಲ ಚಿತ್ರ “ಟಾಮ್ ಅಂಡ್ ಜೆರ್ರಿ“. “ಹಾಯಾಗಿದೆ ಎದೆಯೊಳಗೆ“ ಹಾಡಿಗೆ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ರವರೇ ಸಾಹಿತ್ಯ ರಚಿಸಿದ್ದು, ಸಿದ್ ಶ್ರೀರಾಮ್ ಕಂಠ ಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡು ಖಂಡಿತವಾಗಿಯೂ ದೊಡ್ಡ ಹಿಟ್ ಆಗುತ್ತದೆ ಎನ್ನುವುದು ಇಡೀ ಚಿತ್ರತಂಡದ ನಂಬಿಕೆ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬೆಂಗಳೂರು ಕಮಿಷನರ್ ಕಛೇರಿಯ ಸಿಬ್ಬಂದಿಗೆ ಪ್ರದರ್ಶನ!

Previous article

ಹಲವು ಭಾಷೆಗಳ ಸಿನಿಮಾ ಏಕಕಾಲದಲ್ಲಿ..

Next article

You may also like

Comments

Leave a reply

Your email address will not be published. Required fields are marked *