ಕೆಲವೊಂದು ಟ್ರೇಲರುಗಳು ಆ ಸಿನಿಮಾದ ಅಂತಃಸತ್ವವನ್ನು ಅನಾವರಣಗೊಳಿಸುವಂತೆ ಇರುತ್ತವೆ. ಟಾಮ್‌ ಅಂಡ್‌ ಜೆರ್ರಿ ಸಿನಿಮಾದ ಹಾಯಾಗಿದೆ ಎದೆಯೊಳಗೆ ಹಾಡು ಸೂಪರ್‌ ಹಿಟ್‌ ಆಗಿರುವುದರ ಜೊತೆಗೇ ಈ ಚಿತ್ರದ ಟ್ರೇಲರ್‌ ಕೂಡಾ ಎಲ್ಲರ ಗಮನ ಸೆಳೆಯುವಂತಿದೆ. ಬೇರೆ ಯಾರೇ ಆಗಿದ್ದರೂ ಗೆದ್ದ ಹಾಡನ್ನೇ ಭರ್ತಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ, ನಿರ್ದೇಶಕ ವಿನಯ್‌ ಅಂಥಾ ಪ್ರಯತ್ನ ಮಾಡಿಲ್ಲ. ಸಂಪೂರ್ಣ ಬೇರೆಯದ್ದೇ ಧಾಟಿಯ ಟ್ರೇಲರನ್ನು ರೂಪಿಸಿದ್ದಾರೆ.

ಜೋಡಿಹಕ್ಕಿ ಖ್ಯಾತಿಯ ಚೈತ್ರಾರಾವ್, ನಿಶ್ಚಿತ್ ಕರೋಡಿ ಪ್ರಮುಖ ಪಾತ್ರಗಳಲ್ಲಿ  ಅಭಿನಯಿಸಿರುವ ಚಿತ್ರ ಟಾಮ್ ಅಂಡ್ ಜೆರ್ರಿ. ರಿದ್ಧಿಸಿದ್ಧಿ ಬ್ಯಾನರ್ ಅಡಿಯಲ್ಲಿ, ರಾಜು ಶೇರಿಗಾರ್ ಅವರು ನಿರ್ಮಿಸಿರುವ  ಈ ಚಿತ್ರಕ್ಕೆ    ರಾಘವ್ ವಿನಯ್ ಶಿವಗಂಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೇ ಶುಕ್ರವಾರ ದಿ. 12ರಂದು ತೆರೆಕಾಣಲಿದೆ.

ನಿರ್ಮಾಪಕರು ತಮ್ಮ ಚೊಚ್ಚಲ ನಿರ್ಮಾಣದ ಚಿತ್ರದ ಕುರಿತಂತೆ ಮಾತನಾಡುತ್ತ ಚಿತ್ರದಲ್ಲಿ ಕಾಮಿಡಿ. ಫೈಟ್ ಎಲ್ಲಾ ಥರದ ಎಲಿಮೆಂಟ್ಸ್ ಇದೆ. ತಾಯಿ ಮಗನ ಸಂಬಂಧದ ಕಥೆ ಮನಸಿಗೆ ನಾಟುತ್ತದೆ. ಯೂಥ್‌ಗೆ ಸಪೋರ್ಟ್ ಮಾಡಬೇಕೆಂದು ಚಿತ್ರರಂಗಕ್ಕೆ ಬಂದೆ. ಆರಂಭದಿಂದಲೂ ವೆಂಕಟೇಶಗೌಡ್ರು ನಮ್ಮ ಜೊತೆ ಕೈಜೋಡಿಸಿದ್ದಾರೆ, ಈವಾರ ಎಷ್ಟೇ ಸಿನಿಮಾ ಬಂದರೂ ನಮ್ಮ ಚಿತ್ರಕ್ಕೆ ತೊಂದರೆಯಿಲ್ಲ ಎಂದು ಹೇಳಿದರು. ನಂತರ ನಿರ್ದೇಶಕ ರಾಘವ ಮಾತನಾಡಿ ಈ ಮೊದಲು ನಮ್ಮ ಚಿತ್ರದ  ಟ್ರೈಲರನ್ನು ಪುನೀತ್ ಅವರ ಕೈಲೇ ರಿಲೀಸ್ ಮಾಡಿಸಬೇಕೆಂಬ ಪ್ಲಾನ್ ಇತ್ತು. ಅವರು ನಮ್ಮ ನಮ್ಮ ಒಂದಷ್ಟು ಕನಸುಗಳ ಭಾಗವೂ ಆಗಿದ್ದರು.

ಹೊಸತನ ಇಷ್ಟಪಡುವವರಿಗೆ ನಮ್ಮ ಚಿತ್ರ ಹಿಡಿಸುತ್ತದೆ. ೨ ಪಾತ್ರಗಳು ಅವರವರ ವ್ಯಕ್ತಿತ್ವಕ್ಕೆ ಅನುಸಾರವಾಗಿ ಹೋಗುತ್ತಿರುತ್ತವೆ, ಟಾಮ್ ಅಂಡ್ ಜೆರ್ರಿ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತೆ, ಹುಚ್ಚನ ಪಾತ್ರ ಇವರಿಬ್ಬರಿಗೂ ಬ್ರಿಡ್ಜ್ ಆಗಿರುತ್ತದೆ. ಎಂದು ಹೇಳಿದರು. ನಾಯಕ ನಿಶ್ಚಿತ್ ಮಾತನಾಡಿ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇವೆ ಎಂದರೆ ನಾಯಕಿ ಚೈತ್ರಾರಾವ್ ಮಾತನಾಡಿ ಚಿತ್ರದಲ್ಲಿ ನಾನು ಎನ್‌ಜಿಓದಲ್ಲಿ ಕೆಲಸ ಮಾಡುವ ಹುಡುಗಿ, ತನಗೇನು ಇಷ್ಟವೋ ಅದೇರೀತಿ ಬದುಕುತ್ತಿರುವಂಥ ಹುಡುಗಿ ಎಂದು ಹೇಳಿದರು.   ಟ್ರೈಲರ್‌ಗೆ ವಿಠಲ್ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ.  ನಿರ್ದೇಶಕ ಮ್ಯಾಥ್ಯೂಸ್ ಮನು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಹಾಯಾಗಿದೆ ಎದೆಯೊಳಗೆ ಎಂಬ ಹಾಡಿಗೆ  ಹಿನ್ನೆಲೆ ಗಾಯಕ ಸಿದ್ ಶ್ರೀರಾಮ್ ಅವರು  ದನಿಯಾಗಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿ ಸಂಕೇತ್ ಕೆಲಸ ಮಾಡಿದರೆ, ಸೂರಜ್ ಅಂಕೋಲೆಕರ್ ಸಂಕಲನ ಮಾಡಿದ್ದಾರೆ.

 ಹಿರಿಯ ಕಲಾವಿದರಾದ  ಜೈಜಗದೀಶ್, ತಾರಾ ಅನುರಾಧಾ, ರಾಕ್‌ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಸೇರಿದಂತೆ ಕವಲುದಾರಿ ಖ್ಯಾತಿಯ ಸಂಪತ್ ಮೈತ್ರೇಯ,  ಕೆಜಿಎಫ್ ಖ್ಯಾತಿಯ  ಶೇಖರ್ ಹೀಗೆ  ಸಾಕಷ್ಟು  ಕಲಾವಿದರ ದಂಡೇ ಚಿತ್ರದಲ್ಲಿ ಅಭಿನಯಿಸಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನೆನಪಿರಲಿ… ಇದು ಪ್ರೇಮ್‌ ಲೈಫು….

Previous article

ನಾಳೆಯಿಂದ ತೆರೆಮೇಲೆ ಹಿಟ್ಲರ್ ಅಬ್ಬರ!

Next article

You may also like

Comments

Leave a reply

Your email address will not be published.