ಅಶ್ವಿನಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ತ್ರಿಪುರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚಿಗಷ್ಟೇ ತ್ರಿಪುರ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆದಿದ್ದು, ಕಾರ್ಯಕ್ರಮದಲ್ಲಿ ನಿರ್ದೇಶಕ ಕೆ. ಶಂಕರ್ ಮಾತನಾಡಿ ತ್ರಿಪುರ ಚಿತ್ರದ ಕುರಿತಾಗಿ ಇಂಟ್ರಸ್ಟಿಂಗ್ ಸಂಗತಿಗಳನ್ನು ಶೇರ್ ಮಾಡಿದರು.
“ತ್ರಿಪುರ ಕಾಲ್ಪನಿಕ ಕಥೆಯಾಗಿದ್ದು, ಸರಿ ಸುಮಾರು 500 ವರ್ಷಗಳ ಹಿಂದೆ ಎರಡು ಸಾಮ್ರಾಜ್ಯದ ರಾಜರು ತ್ರಿಪುರ ಸುಂದರಿಗಾಗಿ ನಡೆಸುವ ಕಾಳಗದ ಕಥೆಯಾಗಿರಲಿದೆಯಂತೆ. ಈಗಿನ ಕಾಲ ಘಟ್ಟಕ್ಕೆ ಹೊಂದುವಂತೆ ಸಿನಿಮಾವನ್ನು ಮಾಡಲಾಗಿದ್ದು, ಇದೊಂದು ಮರ್ಡರ್ ಮಿಸ್ಟ್ರಿ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಅಶ್ವಿನಿ ಗೌಡ ಸಾಮ್ರಾಜ್ಯ ಕಳೆದುಕೊಂಡ ರಾಜ ಮನೆತನ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ” ಎಂದು ನಿರ್ದೇಶಕ ಶಂಕರ್ ಹೇಳಿದರು.
ಇನ್ನು ನಿರ್ಮಾಪಕ ಹುಲ್ಲೂರು ಮಂಜುನಾಥ್ ಮಾತನಾಡಿ, “ಮಿಠಾಯಿ ಮನೆಯಲ್ಲಿ ಪಾತ್ರ ಮಾಡಿದ್ದೆ, ಮಿಂಚುಹುಳ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿಧಿಯ ಸುತ್ತ ಸಾಗುವ ಕಥೆ, ಆರಂಭದಲ್ಲಿ 70 ಲಕ್ಷದಲ್ಲಿ ಚಿತ್ರ ಮಾಡುವುದಾಗಿ ನಿರ್ದೇಶಕರು ಭರವಸೆ ನೀಡಿದ್ದರು. ಈಗ 1 ಕೋಟಿ ದಾಟಿದೆ. ಚಿತ್ರ ಚೆನ್ನಾಗಿ ಬಂದಿದೆ ಎಲ್ಲರ ಸಹಕಾರವಿರಲಿ” ಎಂದು ನಿವೇದಿಸಿಕೊಂಡಿರು.
ಅಂಕುರ ಕ್ರಿಯೇಷನ್ ಲಾಂಚನದಡಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕಥೆ, ಚಿತ್ರಕತೆ ನಿರ್ದೇಶನ ಕೆ.ಶಂಕರ್ ಮಾಡಿದ್ದಾರೆ. ಉಳಿದಂತೆ ಗೌರಿ ವೆಂಕಟೇಶ್ ಛಾಯಾಗ್ರಹಣ, ಬಿ.ಆರ್ ಹೇಮಂತ್ ಕುಮಾರ್ ಸಂಗೀತ, ಹರಿಕೃಷ್ಣ ನೃತ್ಯ ನಿರ್ದೇಶನ, ರಾಜಶೇಖರ್ ಸಂಕಲನ ಚಿತ್ರಕ್ಕಿದೆ. ಇನ್ನು ತಾರಾಗಣದಲ್ಲಿ ಆಶ್ವಿನಿ ಗೌಡ ,ಶ್ರೀಧರ್, ಧರ್ಮ,ಟೆನ್ನಿಸ್ ಕೃಷ್ಣ, ರಮಾನಂದ್, ಡಿಂಗ್ರಿನಾಗರಾಜ್, ಥ್ರಿಲ್ಲರ್ ವೆಂಕಟೇಶ್ ಸೇರಿ ಮುಂತಾದವರು ನಟಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ತ್ರಿಪುರ ತೆರೆಗೆ ಬರುವ ಸಾಧ್ಯತೆ ಇದೆ.