ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ಎಲ್. ಮಂಜುನಾಥ್ ಅವರು ನಿರ್ಮಿಸಿರುವ ಸಸ್ಪೆನ್ಸ್, ಥ್ರಿಲ್ಲರ್ ಕಮ್ ಲವ್ ಸ್ಟೋರಿ ಸಿನಿಮಾ ತ್ರಿಪುರ. ಗಂಡು ಹೆಣ್ಣಿನ ಹಿಂದೆ ಬಿದ್ದಾಗ ಏನೆಲ್ಲಾ ಆಗುತ್ತದೆ ಎಂಬ ಸೂಕ್ಷ್ಮ ಸಂಗತಿಗಳನ್ನು ಕೌತುಕವಾಗಿ ತ್ರಿಪುರ ಚಿತ್ರದಲ್ಲಿ ಹೆಣೆಯಲಾಗಿದ್ದು, ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ.
ಯುವಜನಾಂಗಕ್ಕೆ ಹೆಚ್ಚು ಹತ್ತಿರವಾಗುವ ಈ ಚಿತ್ರವನ್ನು ಎಲ್ಲ ವಯೋಮಾನದವರು ನೋಡಬಹುದಾಗಿದ್ದು, ಸದ್ದಿಲ್ಲದೇ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿದೆ. ಇತ್ತೀಚಿಗಷ್ಟೇ ಪ್ರಥಮ ಪ್ರತಿಯನ್ನು ಸಿದ್ದಪಡಿಸಿ ಸೆನ್ಸಾರ್ ಮಂಡಳಿಯ ವೀಕ್ಷಣೆಗೂ ಕಳಿಸಿ ಮಂಡಳಿಯಿಂದ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಎಲ್ಲ ಅಂದುಕೊಂಡಂತಾದರೆ ತ್ರಿಪುರ ಇದೇ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
ಅಶ್ವಿನಿ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಶ್ರೀಧರ್, ಧರ್ಮ, ಟೆನ್ನಿಸ್ ಕೃಷ್ಣ, ಲಕ್ಷ್ಮಣ್ರಾವ್, ಕಿಲ್ಲರ್ ವೆಂಕಟೇಶ್, ರಮಾನಂದ್, ಸುಂದರಶ್ರೀ, ಡಿಂಗ್ರಿ ನಾಗರಾಜ್, ಬೇಬಿ ಆದ್ಯ, ಪವಿತ್ರ, ಮಂಜುನಾಥ್ ಇನ್ನು ಮುಂತಾದವರ ತಾರಾಬಳಗವಿದೆ. ಉಳಿದಂತೆ ಗೌರಿ ವೆಂಕಟೇಶ್ ಛಾಯಾಗ್ರಹಣ, ಡಿ.ಆರ್. ಹೇಮಂತ್ ಕುಮಾರ್ ಸಂಗೀತ, ಕೆ. ಶಂಕರ್ ಸಂಭಾಷಣೆ ಮತ್ತು ಸಾಹಿತ್ಯ, ಹರಿಕೃಷ್ಣ ನೃತ್ಯ ಸಂಯೋಜನೆ, ಚಿತ್ರಕ್ಕಿದೆ.
No Comment! Be the first one.