ಕನ್ನಡ ಸಿನಿಮಾ ಬೇರೆ ಭಾಷೆಗಳಿಗೆ ರಿಮೇಕ್ ಆಗೋದು; ಪರಭಾಷೆಗಳ ಸಿನಿಮಾ ಕನ್ನಡ ಭಾಷೆಗೆ ರಿಮೇಕ್ ಆಗೋದು ಈಗ ಕಾಮನ್ನಾಗಿಬಿಟ್ಟಿದೆ. ಕೆಲ ಸಿನಿಮಾಗಳು ಗೆದ್ದರೆ, ಮತ್ತೆ ಕೆಲವು ಸಿನಿಮಾಗಳು ತೋಪಾಗುತ್ತವೆ. ಭಾಷೆ ಯಾವುದಾದರೇನು ಕಥೆ, ಚಿತ್ರಕತೆ, ನಿರೂಪಣೆ ಪ್ರಮುಖವಾಗಿರುತ್ತದೆಯಲ್ಲವೇ. ಡಬ್ಬಿಂಗ್ ವಿರೋಧಿಸುತ್ತಿದ್ದ ಸ್ಯಾಂಡಲ್ ವುಡ್ ಕೂಡ ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಗಳಿಗೆ ಡಬ್ ಮಾಡುವ ಟ್ರೆಂಡ್ ಶುರುವಾಗಿದ್ದು, ಡಬ್ಬಿಂಗ್ ಬೇಡ ಎನ್ನುತ್ತಿದ್ದವರೆಲ್ಲ ತುಟಿಕ್ ಪಿಟಿಕ್ ಎನ್ನದೇ ತೆಪ್ಪಗಾಗಿಬಿಟ್ಟಿದ್ದಾರೆ.
ಪರಭಾಷಾ ಚಿತ್ರಗಳು ರಿಮೇಕ್ ಆಗುವ ಜತೆ ಜತೆಗೆ ಡಬ್ ಆಗಿ ಕೂಡ ರಿಲೀಸ್ ಆಗುತ್ತಲೇ ಇವೆ. ಅದರಂತೆ ಕನ್ನಡದ ಸಿನಿಮಾಗಳು ಸಹ ಡಬ್ ಆಗಿ ಹೊರ ರಾಜ್ಯಗಳಲ್ಲಿ ತೆರೆ ಕಾಣುತ್ತಲೂ ಇವೆ. ಸದ್ಯ ಕನ್ನಡದ ಕೃಷ್ಣ ತುಳಸಿ ಸಿನಿಮಾವೂ ಸಹ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಲು ರೆಡಿಯಾಗಿದೆ. ಹೌದು ಕಳೆದ ವರ್ಷ ರಿಲೀಸ್ ಆಗಿ ಈಗಾಗಲೇ ಕಿರುತೆರೆಯಲ್ಲಿಯೂ ಪ್ರಸಾರವಾಗಿರುವ ಕೃಷ್ಣ ತುಳಸಿ ಸಿನಿಮಾ ತೆಲುಗಿನಲ್ಲಿ ತುಳಸಿ ಕೃಷ್ಣ ಹೆಸರಿನಲ್ಲಿ ಡಬ್ ಆಗಿದ್ದು, ಮೇ 2ರಂದು ರಿಲೀಸ್ ಆಗಲಿದೆ. ಚಿತ್ರದಲ್ಲಿ ಸಂಚಾರಿ ವಿಜಯ್ ಅಂಧನಾಗಿ ಅಂದವಾಗಿ ನಟಿಸಿದ್ದು, ಮೇಘಶ್ರೀ ನಾಯಕಿಯಾಗಿದ್ದಾರೆ. ಸದ್ಯಕ್ಕೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಷ್ಟ್ರಪ್ರಶಸ್ತಿ ವಿಜೇತ ವಿಜಯ್ ಪುಕ್ಸಟ್ಟೆ ಲೈಫು, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೇಲೊಬ್ಬ ಮಾಯಾವಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
No Comment! Be the first one.