ಠಾಕೂರ್ ಅನೂಪ್ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಉದ್ಘರ್ಷ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡಿರುವ ಈ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಉದ್ಘರ್ಷ ಚಿತ್ರ ತೆರೆಕಾಣಲಿದೆ.ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಎಂದೇ ಹೆಸರಾಗಿರುವವರು ಸುನೀಲ್ ಕುಮಾರ್ ದೇಸಾಯಿ. ಅವರು ಬಹಳಷ್ಟು ವರ್ಷಗಳ ಗ್ಯಾಪಿನ ನಂತರದಲ್ಲಿ ಉದ್ಘರ್ಷ ಚಿತ್ರದ ಮೂಲಕ ಮತ್ತೆ ಮರಳಿದ್ದಾರೆ. ಹಾಗೆಂದ ಮೇಲೆ ಪ್ರೇಕ್ಷಕರಲ್ಲೊಂದು ಕ್ಯೂರಿಯಾಸಿಟಿ ಹುಟ್ಟೋದು ಸಹಜವೇ. ಅದನ್ನು ಮತ್ತಷ್ಟು ಉದ್ದೀಪನಗೊಳಿಸುವಂಥಾ ಮಾತುಗಳನ್ನು ಸುನೀಲ್ ಕುಮಾರ್ ದೇಸಾಯಿ ಅವರಾಡಿದ್ದಾರೆ.
‘ಸಸ್ಪೆನ್ಸ್ ಥ್ರಿಲ್ಲರ್ ಕಥೆಗಾಗಿ ಹಂಬಲಿಸೋ ದೊಡ್ಡ ಸಂಖ್ಯೆಯ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಕೇವಲ ಆ ವರ್ಗ ಮಾತ್ರವಲ್ಲದೇ ಎಲ್ಲ ಬಗೆಯ ಪ್ರೇಕ್ಷಕರಿಗೂ ಹಬ್ಬದಂಥಾ ಸಂತೋಷ ಕೊಡೋ ಚಿತ್ರ ಉದ್ಘರ್ಷ ಎಂಬಂಥಾ ಭರವಸೆಯ ಮಾತುಗಳನ್ನು ದೇಸಾಯಿಯವರು ಆಡಿದ್ದಾರೆ.ಇನ್ನು ಕಥೆಯ ವಿಚಾರದಲ್ಲಿಯೂ ಕೂಡಾ ಅನೇಕ ವಿಶೇಷತೆಗಳಿದ್ದಾವೆ. ಇಲ್ಲಿ ಸ್ಟಾರ್ ನಟರಿಲ್ಲ. ಅದಕ್ಕೆ ಪೂರಕವಾದ ಖತೆ ಇದೆ. ಇಲ್ಲಿನ ಪ್ರತೀ ಪಾತ್ರಗಳೂ ಕೂಡಾ ಕುತೂಹಲದೊಂದಿಗೇ ಪ್ರೇಕ್ಷಕರನ್ನ ಕೈ ಹಿಡಿದು ಕರೆದೊಯ್ಯುತ್ತವೆ. ಕಥೆಯೇ ಹೋರೋ ಸ್ಥಾನದಲ್ಲಿರೋದರಿಂದ ಪ್ರತೀ ಕಲಾವಿದರೂ ಪಾತ್ರವಾಗಿ ಪ್ರೇಕ್ಷಕರನ್ನ ಕಾಡುತ್ತಾರಂತೆ. ಒಟ್ಟಾರೆಯಾಗಿ ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಪ್ರೇಮಿಗಳಿಗೆ ಹಬ್ಬದಂಥಾ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ!
No Comment! Be the first one.