ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಇದೇ ಮಾರ್ಚ್ 22ರಂದು ತೆರೆಗಾಣಲಿದೆ. ಈಗಾಗಲೇ ಕನ್ನಡದಾಚೆಗೂ ಈ ಚಿತ್ರದ ಬಗ್ಗೆ ಸಕಾರಾತ್ಮಕ ಮಾತುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಉದ್ಘರ್ಷ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದೆ.
ಈ ಸಿನಿಮಾದಲ್ಲಿ ಕಥೆಯದ್ದೇ ಒಂದು ತೂಕವಾದರೆ, ಪಾತ್ರವರ್ಗದ್ದು ಮತ್ತೊಂದು ತೂಕ. ಬಾಡಿ ಬಿಲ್ಡ್ ನಲ್ಲಿ ಬಂಗಾರದ ಪದಕ ಪಡೆದುಕೊಂಡಿರುವ ಖ್ಯಾತ ಖಳನಟ ಠಾಕೂರ್ ಅನೂಪ್ ಸಿಂಗ್ ಉದ್ಘಷ ಮೂಲಕವೇ ನಾಯಕನಾಗಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರಗಳ ಮೂಲಕವೇ ಪರಿಚಿತರಾಗಿರೋ ಧನ್ಷಿಕಾ ಮತ್ತು ಕರೀಷ್ಮಾ ನಾಯಕಿಯರಾಗಿ ನಟಿಸಿದ್ದಾರೆ. ಖ್ಯಾತ ಖಳನಟ ಕಬೀರ್ ಸಿಂಗ್, ಬಾಹುಬಲಿ ಫೇಮಿನ ಪ್ರಭಾಕರ್ ಮುಂತಾದವರ ಅದ್ದೂರಿ ತಾರಾಗಣವೂ ಈ ಚಿತ್ರಕ್ಕಿದೆ. ಇವರೆಲ್ಲರ ಪಾತ್ರಗಳನ್ನೂ ಕೂಡಾ ದೇಸಾಯಿಯವರು ಎಲ್ಲರಿಗೂ ಇಷ್ಟವಾಗುವಂತೆಯೇ ಕಟ್ಟಿಕೊಟ್ಟಿದ್ದಾರಂತೆ.
ದೇಸಾಯಿಯವರ ಚಿತ್ರಗಳೆಂದ ಮೇಲೆ ಹೊಸತನ ಇದ್ದೇ ಇರುತ್ತೆ. ಎಂಭತ್ತರ ದಶಕದಲ್ಲಿಯೇ ಈ ಹೊತ್ತಿನ ಟ್ರೆಂಡಿಗೆ ತಕ್ಕುದಾದ ಚಿತ್ರಗಳನ್ನು ಮಾಡಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರು ಉದ್ಘರ್ಷ ಚಿತ್ರದ ಮೂಲಕ ಮತ್ತೊಂದು ಇಪ್ಪತ್ತು ವರ್ಷ
No Comment! Be the first one.