25 ವರ್ಷಗಳಿಂದ ಕರ್ನಾಟಕದಲ್ಲಿರಾಜ್ಯದ ಮನೆ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಚಾನಲ್ಉದಯಟಿವಿ.ಅನೇಕ ಮನ ಮೆಚ್ಚುವ ಧಾರಾವಾಹಿಗಳನ್ನು, ಅನೇಕ ರಿಯಾಲಿಟಿ ಷೋಗಳನ್ನು ನೀಡುತ್ತಾ ಬಂದಿರುವಉದಯಟಿವಿಯುಇಂದಿಗೂ ಕೂಡಾವೀಕ್ಷಕರ ಮೆಚ್ಚುಗೆ ಗಳಿಸುವುದರಲ್ಲಿ ಯಶಸ್ವಿಯಾಗಿದೆ.
ಉದಯ ಟಿವಿ ತನ್ನ ಬೆಳ್ಳಿ ಮಹೋತ್ಸದ ಸುಸಂದರ್ಭದಲ್ಲಿ ಈಗ ಮತ್ತೊಂದು ವಿಶೇಷ ಕಾರ್ಯಕ್ರಮವನ್ನು ನೀಡುವುದಕ್ಕೆ ಮುಂದಾಗಿದೆ, ಕರ್ನಾಟಕದ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಅವರಲ್ಲಿರುವ ನೈಪುಣ್ಯತೆಯನ್ನುರಾಜ್ಯದತುಂಬೆಲ್ಲಾ ಪ್ರದರ್ಶಿಸಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಉದಯ ಟಿವಿ ಹೆಮ್ಮೆಯಿಂದ ಪ್ರಾರಂಭಿಸುತ್ತಿರುವ ಮಹಿಳಾ ವೇದಿಕೆ “ಉದಯ ಸಖಿ”.
ಮೊದಲ “ಉದಯ ಸಖಿ”ಯನ್ನು ಸಂಸ್ಕೃತಿಕ ನಾಡು,ವಿಶ್ವ ವಿಖ್ಯಾತ ಮೈಸೂರಿನಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ. ಇದೇ ಫೆಬ್ರವರಿ 14 (ಗುರುವಾರ) ಬೆಳಗ್ಗೆ 10 ಗಂಟೆಗೆ ಅಶೋಕ ನಗರದ “ಸೌಗಂಧಿಕ ಪಾರ್ಕ” ನಲ್ಲಿ ವರ್ಣರಂಜಿತಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಳ್ಳಲಿದೆ.
ಅಂದು ಬೆಳಗ್ಗೆ ಯೋಗಾನರಸಿಂಹ ದೇವಸ್ಥಾನದ ಸಂಸ್ಥಾಪಕರಾದ ಪೂಜ್ಯ ಭಾಷ್ಯಂ ಸ್ವಾಮಿಜಿಯವರ ಘನ ಉಪಸ್ಥಿತಿಯಲ್ಲಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ಉದ್ಘಾಟಕರಾಗಿಆಗಮಿಸುವರು. ನಂತರ ಶ್ರೀಯುತರು “ಉದಯ ಸಖಿಯ” ಲಾಂಛನವನ್ನು ಸ್ಕ್ರೀನಿಂಗ್ಮಾಡುವದರ ಮೂಲಕ ಉದ್ಘಾಟಿಸುತ್ತಾಕರ್ನಾಟಕಕ್ಕೆ ಸಮರ್ಪಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಉದಯಟಿವಿಯ ಹೆಸರಾಂತಧಾರಾವಾಹಿ “ಕಾವೇರಿಯ” ನಟ ನಟಿಯರು ಭಾಗವಹಿಸಲಿದ್ದಾರೆ. ಅಲ್ಲದೇ “ಉದಯ ಸಖಿಯರಿಂದ ವಿವಿಧರೀತಿಯ ಮನರಂಜನೆ ನಡೆಯಲಿದೆ.
#