ಪೊಲಿಟಿಕಲ್, ಕ್ರೈಮ್, ಥ್ರಿಲ್ಲರ್ ಫೀಚರ್ ಸಿನಿಮಾ ಉನರ್ವು. ಈ ಚಿತ್ರಕ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೆಶಕ ಸುಬು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೂರ್ತಿ ಸಿನಿಮಾ ಮಾನವ ಬುದ್ದಿ ಶಕ್ತಿಯನ್ನು ಆಧಾರವಾಗಿಟ್ಟುಕೊಂಡೇ ಸಾಗಲಿದೆ. ಅಲ್ಲದೇ ಚಿತ್ರದಲ್ಲಿ ಸಾಕಷ್ಟು ಸೆಂಟಿಮೆಂಟ್ ಸೀನುಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರವನ್ನು ಮಾಡಲಾಗಿದೆಯಂತೆ. ಈಗಾಗಲೇ ಚಿತ್ರದ ಚಿತ್ರೀಕರಣ ಚೆನೈ, ಉತ್ತರಖಂಡ್, ಬೆಂಗಳೂರಿನಲ್ಲಿ ಮುಗಿಸಿದೆ. ಎಲ್ಲ ವಯೋಮಾನದ ಪ್ರೇಕ್ಷಕರನ್ನು ಕೇಂದ್ರೀಕರಿಸುವುದು ಚಿತ್ರಕ್ಕೆ ಪ್ಲಸ್ ಆಗಲಿದೆ. ಜೂನ್ 19ಕ್ಕೆ ಉನರ್ವು ಟೀಸರ್ ಬಿಡುಗಡೆಯಾಗಲಿದೆ.

ಶಿವಾಜಿ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದ ಸುಮನ್ ತಲ್ವಾರ್ ಉನರ್ವು ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅರುಲ್ ಶಂಕರ್, ಕೊಟ್ಟಾಚಿ, ಶಿನವ್, ಅಂಕಿತಾ ನವ್ಯ, ಕಾಂತಸ್ವಾಮಿ ಅಭಿನಯಿಸಿದ್ದಾರೆ. ಇನ್ನು ಎ.ಆರ್. ರೆಹಮಾನ್ ಹಿನ್ನೆಲೆ ಸಂಗೀತ, ಡೇವಿಡ್ ಛಾಯಾಗ್ರಹಣ, ಚಂದನ್ ಸಂಕಲನ, ಕವಿವೇಲನ್ ಸಂಭಾಷಣೆ, ಈ ಚಿತ್ರಕ್ಕಿದೆ. ಉನರ್ವುವನ್ನು ಶೇಖರ್ ಜಯರಾಮ್ ನಿರ್ಮಾಣ ಮಾಡುತ್ತಿದ್ದು, ಅವರಿಗೆ ಸರಿತಾ ಓಂ ಪ್ರಕಾಶ್, ಪುರುಷೋತ್ತಮ್ ಮತ್ತು ನಿವೇದಿತಾ ಪ್ರಭು ಸಾಥ್ ನೀಡಿದ್ದಾರೆ. ಜುಲೈ ತಿಂಗಳಿಗೆ ಉನರ್ವು ರಿಲೀಸ್ ಆಗಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಟಾಲಿವುಡ್ ನಲ್ಲೂ ಐ ಲವ್ ಯು ಫೀವರ್ ಸಾಧ್ಯತೆ!

Previous article

ಸದ್ಯದಲ್ಲೇ ಶುರುವಾಗಲಿದೆ ತಾಜ್ ಮಹಲ್ 2

Next article

You may also like

Comments

Leave a reply

Your email address will not be published. Required fields are marked *