ಕಂಗನಾ ಡೆಡಿಕೇಟೆಡ್ ನಾಯಕಿ ಮಾತ್ರವಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡವರು. ಸ್ಟಾರ್ ಗಳು ತಮ್ಮ ಹಳೆಯ ನೆನಪುಗಳನ್ನು ಒಂದಿಲ್ಲೊಂದು ಸಂದರ್ಭಗಳಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರ್ತಾರೆ ಅಲ್ವೇ. ಸದ್ಯ ತಮಿಳುನಾಡು ಮುಖ್ಯಮಂತ್ರಿ ಜಯ ಲಲಿತಾ ಅವರ ಬಯೋಪಿಕ್ ನ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಂಗನಾ, ತನ್ನ ಹಳೆಯ ಕಹಿ ಘಟನೆಯೊಂದನ್ನು ಕೆದಕಿದ್ದಾರೆ. ಅದೂ ಸೀನಿಯರ್ ಡೈರೆಕ್ಟರ್ ಹಾಗೂ ಸೆನ್ಸಾರ್ ಬೋರ್ಡ್ ನ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ಬಗ್ಗೆ..
ಈ ಹಿಂದೆ ಪಹ್ಲಾಜ್ ನಿಹ್ಲಾನಿಯವರು ತಮ್ಮ ಐ ಲವ್ ಯು ಬಾಸ್ ಸಿನಿಮಾಕ್ಕಾಗಿ ಆಡಿಷನ್ ಕರೆದಿದ್ದರಂತೆ. ಆ ಆಡಿಷನ್ ಗೆ ಕಂಗನಾ ಕೂಡ ಭಾಗವಹಿಸಿದ್ದರು. ಸೀನಿಯರ್ ಡೈರೆಕ್ಟರ್ ಪಹ್ಲಜ್ ನಿಹ್ಲಾನಿ ಕಂಗನಾರಿಗೆ “ನಿನ್ನ ಅಂಡರ್ ವೇರ್ ಕಳಚಿ ನಿನ್ನ ಕಾಲನ್ನು ಎಕ್ಸ್ ಪೋಸ್ ಮಾಡು’’ ಎಂದಿದ್ದರಂತೆ. ಕಂಗನಾ ಅದಕ್ಕೆ ಸಮ್ಮತಿಸದೇ ಅಲ್ಲಿಂದ ಹೊರಟು ಹೋಗಿದ್ದರು. ಅಷ್ಟೇ ಅಲ್ಲದೇ ತನ್ನ ಮೊಬೈಲ್ ನಂಬರ್ ಬದಲಿಸಿಕೊಂಡು ಆ ಸಿನಿಮಾದ ಸಹವಾಸವೇ ಬೇಡಪ್ಪ ಎಂದು ಉಳಿದರಂತೆ. ಅಶ್ಲೀಲ ಪಾತ್ರದಲ್ಲಿ ನಟಿಸುವುದು ಕಂಗನಾ ಅವರಿಗೆ ಇಷ್ಟವಿರಲಿಲ್ಲವಂತೆ.
ಇಂತಹ ಸಾಕಷ್ಟು ಅನುಭವಗಳನ್ನೆಲ್ಲ ಮೆಟ್ಟಿ ನಿಂತ ಕಂಗನಾ ಇಂದು ಬಾಲಿವುಡ್ ನ ಬಹುಬೇಡಿಕೆಯ ನಟಿಮಣಿಯರಲ್ಲೊಬ್ಬರಾಗುವುದು ಖುಷಿ ಪಡುವ ವಿಚಾರ. ಅಷ್ಟೇ ಅಲ್ಲದೇ ಸದ್ಯ ಕಂಗನಾ ಜಯಲಲಿತಾ ಬಯೋಪಿಕ್ ನ ಸಿನಿಮಾದ ಮೂಲಕ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯೂ ಕೂಡ. ಈ ಸಿನಿಮಾ ತಮಿಳಿನಲ್ಲಿ ತಲೈವಿಯಾಗಿ ಹಿಂದಿಯಲ್ಲಿ ಜಯ ಟೈಟಲ್ ನಲ್ಲಿ ವಿಜಯ್ ನಿರ್ದೇಶನದಲ್ಲಿ ಮೂಡಿಬರಲಿದೆ.
No Comment! Be the first one.