ವಿಚಿತ್ರ ಮ್ಯಾನರಿಜಂ, ಹೇರ್ ಸ್ಟೈಲು, ಡೈಲಾಗು ಎಂದರೆ ಚಂದನವನದಲ್ಲಿ ನೆನಪಾಗುವ ಯೂನಿಕ್ ಹೆಸರು ಉಪೇಂದ್ರ. ಅವರ ಅಭಿಮಾನಿಗಳು ಸಹ ಉಪೇಂದ್ರ ಅವರ ಹಾಗೆಯೇ ಇಷ್ಟಪಡುತ್ತಾರೆ. ಉಪೇಂದ್ರ ತಮ್ಮ ಸಿನಿಮಾದಲ್ಲಿ ಬಳಸುವ ಪರಿಕರಗಳು, ಅನುಸರಿಸುವ ಸ್ಟೈಲುಗಳು, ಮಾಡುವ ಕೆಲಸಗಳನ್ನು ನಿಜ ಜೀವನದಲ್ಲಿಯೂ ಬಹಳಷ್ಟು ಮಂದಿ ಅನುಸರಿಸುತ್ತಾರೆ. ಹೀಗೆ ಈ ಹಿಂದೆ ಉಪೇಂದ್ರ ನಿರ್ದೇಶಿಸಿದ್ದ ಸೂಪರ್ ಸಿನಿಮಾದ ಚಿತ್ರದ ಸಿಂಬಲ್ ಜತೆ ಅವ್ರ ಹೇರ್ ಸ್ಟೈಲ್ ಕೂಡ ಸಿಕ್ಕಾಪಟ್ಟೆ ಫೇಮಸ್ ಕೂಡ ಆಗಿತ್ತು. ಬಹಳಷ್ಟು ಉಪೇಂದ್ರ ಅವರ ಅಭಿಮಾನಿಗಳು ಅವರ ಸ್ಟೈಲನ್ನು ಅನುಕರಣೆ ಮಾಡಿದ್ದರು.

ಇದೀಗ ಅವರ ಸಾಲಿಗೆ ಲಂಡನ್ ಪ್ರಸಿದ್ಧ ಪಾಪ್ ಗಾಯಕಿ, ಫ್ಯಾಷನ್ ಡಿಸೈನರ್, ನಟಿ, ಉದ್ಯ ರಿಹಾನ್ನಾ ಕೂಡ ಸೇರಿದ್ದಾರೆ ಅನ್ನೋ ಡೌಟು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯೆಸ್.. ಅವರು ಇತ್ತೀಚಿಗೆ ಇನ್ ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಲಕ್ಷುರಿ ಆಸನದಲ್ಲಿ ಕೂತಿರೋ ರಿಹಾನ್ನಾ ತಮ್ಮ ತಲೆ ಮೇಲಿರುವ ಗುಂಗುರು ಕೂದಲುಗಳನ್ನು ಉಪೇಂದ್ರರ ಸ್ಟೈಲ್ ನಲ್ಲಿ ಜುಟ್ಟುಕಟ್ಟಿದ್ದಾರೆ. ನಾಲ್ಕು ಜುಟ್ಟನ್ನ ಕಟ್ಟಿರುವ ಫೋಟೋ ನೋಡಿದ್ರೆ ನಿಮ್ಗೆ ಉಪೇಂದ್ರ -2 ಸಿನಿಮಾದಲ್ಲಿ ಉಪ್ಪಿ ಮಾಡಿರುವ ಹೇರ್​ಸ್ಟೈಲ್​​ ನೆನಪಿಸುವಂತಿದೆ. ಆಕೆ ಉಪೇಂದ್ರ ಅವರ ಸ್ಟೈಲನ್ನು ಕಾಪಿ ಮಾಡಲಿ ಬಿಡಲಿ.. ಆದರೆ ಉಪೇಂದ್ರ ಅವರ ಸ್ಟೈಲ್ ನಂತೆ ಕಾಣುತ್ತಿರುವುದು ಮಾತ್ರ ನಿಜ…

CG ARUN

ಕೂಲಿ ನಂ 1 ರಿಮೇಕಿಗೆ ಮೂಲ ಹಾಡಿನ ಬಳಕೆ!

Previous article

ವಿಶ್ವಕಪ್ ಸೋಲು ಅಲ್ಲಗಳೆದ ವಿವೇಕ್ ಒಬೆರಾಯ್!

Next article

You may also like

Comments

Leave a reply

Your email address will not be published. Required fields are marked *