ಸಿನಿಮಾ ಬಿಡುಗಡೆಗೂ ಮುನ್ನವೇ ಹವಾ ಸೃಷ್ಟಿಸಿದ್ದ ಐ ಲವ್ ಯು ಚಿತ್ರದ ಮಾತನಾಡಿ ಮಾಯವಾದೆ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ರೊಮ್ಯಾಂಟಿಕ್ ಮೂಡ್ ನಲ್ಲಿದ್ದು ರಚಿತಾ ರಾಮ್ ಬೋಲ್ಡಾಗಿ ನಟಿಸಿದ್ದಾರೆ. ಕೆಲ ದಿನಗಳ ಹಿಂದೆ ಈ ಹಾಡಿನ ಕುರಿತಾಗಿಯೇ ಹೆಚ್ಚು ಚರ್ಚೆಗಳು ಶುರುವಾಗಿದ್ದು, ರಚಿತಾ ರಾಮ್ ಉಪೇಂದ್ರ ಅವರ ಡೈರೆಕ್ಷನ್ ಮೇಲೆಯೇ ಈ ಹಾಡನ್ನು ಮಾಡಿದ್ದು ಎಂದು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದರು. ಇದಕ್ಕೆ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಗರಂ ಕೂಡ ಆಗಿದ್ದರು.
ಐ ಲವ್ ಯು ಬಿಡುಗಡೆಯಾಗಿ ಬರೋಬ್ಬರಿ 50 ದಿನಗಳಾಗುತ್ತಿರುವಂತೆಯೇ ಈ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿನ ವಿವಾದದಿಂದಲೇ ಸಾಕಷ್ಟು ಮಂದಿ ಸಿನಿಮಾದಲ್ಲಿ ಅಂತದ್ದೇನಿದೆ ಎಂಬ ಕುತೂಹಲದಲ್ಲಿಯೇ ಥಿಯೇಟರ್ ಗೆ ಹೋಗುವಂತಾಗಿತ್ತು. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡಿನ ವಿಡಿಯೋ ಬಿಡುಗಡೆಯಾಗಿದ್ದು, ಹಾಡು ರಿಲೀಸ್ ಆದ 18 ಗಂಟೆಗಳಲ್ಲಿಯೇ ಒಂದು ಲಕ್ಷ ಹಿಟ್ಸ್ ಪಡೆಯುತ್ತ ಮುನ್ನುಗ್ಗುತ್ತಿದೆ. ಈ ಹಾಡನ್ನು ಅರ್ಮಲ್ ಮಲ್ಲಿಕ್ ಹಾಡಿದ್ದು, ಸಂತೋಷ್ ನಾಯಕ ಗೀತ ಸಾಹಿತ್ಯ ಬರೆದ್ದಾರೆ.