ಕನ್ನಡ ಚಿತ್ರರಂಗದಲ್ಲಿ ಆಗಾಗ ಬಿರುದು ಬಾವಲಿಗಳ ಬಗ್ಗೆ ಅಭಿಮಾನಿಗಳು ರೊಚ್ಚಿಗೆದ್ದು ಕಾದಾಡೋದು ಮಾಮೂಲು. ಇತ್ತೀಚೆಗಷ್ಟೇ ಬಾಸ್ ಟೈಟಲ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶಿವಣ್ಣನ ಅಭಿಮಾನಿಗಳು ಕಿತ್ತಾಡಿಕೊಂಡು ತಣ್ಣಗಾಗಿರೋ ಹೊತ್ತಿನಲ್ಲಿಯೇ ಕಾರ್ತಿಕ್ ಜಯರಾಮ್ ವಿರುದ್ಧ ಉಪೇಂದ್ರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ!
ಜೆಕೆ ನಟಿಸಿರುವ ಮೇ ಫಸ್ಟ್ ಎಂಬ ಚಿತ್ರ ಕಳೆದ ವಾರವಷ್ಟೇ ತೆರೆ ಕಂಡಿತ್ತು. ಇದೀಗ ಆ ಚಿತ್ರ ಯಾರೂ ನಿರೀಕ್ಷಿಸದ ರೇಂಜಿನಲ್ಲಿ ಕಳಪೆ ಪ್ರದರ್ಶನವನ್ನೂ ಕಾಣುತ್ತಿದೆ. ಆದರೆ ಆ ಚಿತ್ರದಲ್ಲಿ ಜೆಕೆ ಅವರಿಗೆ ಸೂಪರ್ ಸ್ಟಾರ್ ಅಂತ ಸಂಬೋಧಿಸಲಾಗಿದೆಯಂತೆ. ಈ ವಿಚಾರದ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಜೆಕೆ ವಿರುದ್ಧ ಉಪೇಂದ್ರ ಅಭಿಮಾನಿಗಳು ಬುಸುಗುಡಲಾರಂಭಿಸಿದ್ದಾರೆ!
ಸೂಪರ್ ಸ್ಟಾರ್ ಎಂಬ ಬಿರುದು ಯಾವತ್ತಿದ್ದರೂ ಕನ್ನಡದಲ್ಲಿ ಉಪೇಂದ್ರ ಅವರ ಸ್ವತ್ತು. ಅದು ಅವರೊಬ್ಬರಿಗೆ ಮಾತ್ರವೇ ಸೀಮಿತ. ಅದನ್ನು ಯಾರೇ ಬಳ:ಸಿಕೊಂಡರೂ ಸುಮ್ಮನಿರೋದಿಲ್ಲ. ಈ ಬಗ್ಗೆ ಕ್ಷಮೆ ಕೇಳಬೇಕು ಅಂತ ಉಪೇಂದ್ರ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಆದರೆ ಈ ಬಗ್ಗೆ ಸ್ವತಃ ಜೆಕೆ ತಾಳ್ಮೆಯಿಂದಲೇ ವರ್ತಿಸುವ ಮೂಲಕ ವಿನಾ ಕಾರಣ ರಾಡಿಯೇಳೋದನ್ನು ತಡೆದಿದ್ದಾರೆ.
ಮೇ ಫಸ್ಟ್ ಚಿತ್ರದಲ್ಲಿ ಸೂಪರ್ ಸ್ಟಾರ್ ಅಂತ ಸಂಬೋದಿಸಲ್ಪಟ್ಟಿರೋದಕ್ಕೆ ಕಾರಣವಿದೆ. ಅದು ಆ ಕಥೆಗೆ ಮಾತ್ರವೇ ಸೀಮಿತ. ಚಿತ್ರ ನೋಡಿದರೆ ಅದೇನೆಂಬುದು ಅರ್ಥವಾಗುತ್ತದೆ. ಕೇವಲ ಒಂದು ದೃಷ್ಯದಿಂದ ಏನನ್ನೂ ತೀರ್ಮಾನಿಸಲಾಗೋದಿಲ್ಲ ಅಂದಿರೋ ಜೆಕೆ ತಾವೂ ಕೂಡಾ ಉಪೇಂದ್ರ ಅವರ ಅಭಿಮಾನಿ ಎಂದಿದ್ದಾರೆ. ಯಾವ ಕಾರಣದಿಂದಲೂ ಉಪೇಂದ್ರ ಅವರನ್ನು ಓವರ್ ಟೇಕ್ ಮಾಡೋ ಹುಂಬತನ ತನ್ನಲ್ಲಿಲ್ಲ. ಆದ್ದರಿಂದ ಅಭಿಮಾನಿಗಳು ಈ ಬಗ್ಗೆ ವಿನಾ ಕಾರಣ ವಿವಾದ ಸೃಷ್ಟಿಸಬಾರದೆಂದು ಮನವಿ ಮಾಡಿಕೊಂಡಿದ್ದಾರೆ.
#
No Comment! Be the first one.