ಮೊನ್ನೆ ತಾನೆ ಎಲೆಕ್ಷನ್ ಮುಗಿದು ರಿಸಲ್ಟೂ ಹೊರಬಂದಿದೆ. ಈ ಸಲದ ಚುನಾವಣೆಯಲ್ಲಿ ಸಾಕಷ್ಟು ನಟ-ನಟಿಯರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ʻಇವರು ನನ್ನ ಆತ್ಮೀಯರು. ಅದಕ್ಕಾಗಿ ಪ್ರಚಾರ ಮಾಡುತ್ತಿದ್ದೇನೆʼ ಅಂತಾ ಬಾಯಿಮಾತಿಗೆ ಹೇಳಿಕೊಂಡಿದ್ದಾರಾದರೂ, ಬಹುತೇಕರು ದಿನದ ಪೇಮೆಂಟು ಪಡೆದು ಕ್ಯಾನ್ವಾಸ್ ಮಾಡಿ ಬಂದವರೇ!
ನಟ, ನಿರ್ದೇಶಕ, ಸಿನಿಮಾರಂಗದಲ್ಲಿ ಒಂದು ಪೀಳಿಗೆಗೆ ಗಾಡ್ ಫಾದರ್ ಅನ್ನಿಸಿಕೊಂಡಿರುವವರು ರಿಯಲ್ ಸ್ಟಾರ್ ಉಪೇಂದ್ರ. ಸಿನಿಮಾವಲಯದಲ್ಲಿ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುವವರು. ಹಾಗೇನಾದರೂ ಸ್ನೇಹ, ಪ್ರೀತಿ, ವಿಶ್ವಾಸಕ್ಕೆ ಕಟ್ಟುಬಿದ್ದು ಪ್ರಚಾರಕ್ಕೆ ಹೋಗುವುದಿದ್ದರೆ, ಉಪೇಂದ್ರನ ಪ್ರಜಾಕೀಯಕ್ಕೇ ಎಲ್ಲರೂ ಬೆಂಬಲ ಘೋಷಿಸಬಹುದಿತ್ತಲ್ಲಾ? ಈ ಚಿತ್ರರಂಗದಲ್ಲಿ ಫ್ರೆಂಡ್‌ಶಿಪ್ಪು, ನಂಬಿಕೆ ಇತ್ಯಾದಿಗಳಿಗಿಂತಾ ದುಡ್ಡೇ ಮುಖ್ಯ ಅನ್ನೋದು ಈ ಸಲದ ಚುನಾವಣೆಯಲ್ಲೂ ಸಾಬೀತಾಗಿದೆ. ಯಾರ ಬೆಂಬಲವೂ ಇಲ್ಲದೆ ಉಪ್ಪಿಯ ಪ್ರಜಾಕೀಯ ಅನಾಥವಾಗಿದೆ…!