ಕಾಲೇಜು ದಿನಗಳಲ್ಲೇ ಉಪೇಂದ್ರ ಅವರ ಅಪ್ಪಟ ಅಭಿಮಾನಿಯಾಗಿದ್ದವರು ಮಂಜು ಮಾಂಡವ್ಯ. ಉಪ್ಪಿ ಮೇಲಿನ ಅಭಿಮಾನವೇ ಅವರನ್ನು ಚಿತ್ರರಂಗಕ್ಕೆ ಬರುವಂತೆ ಪ್ರೇರೇಪಿಸಿತ್ತು. ಇವತ್ತು ಅದೇ ಉಪ್ಪಿಯ ಅತಿಹೆಚ್ಚು ಬಜೆಟ್ಟಿನ ಸಿನಿಮಾವನ್ನು ಮಂಜು ನಿರ್ದೇಶನ ಮಾಡಲಿದ್ದಾರೆ…

ಸೂಪರ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಲಿರುವ ನೂತನ ಚಿತ್ರ 2021ರ ಜನವರಿಯಲ್ಲಿ ಆರಂಭವಾಗಲಿದೆ. 100 cr ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾವಿದು. ಮಾಸ್ಟರ್ ಪೀಸ್ ಖ್ಯಾತಿಯ ಮಂಜು ಮಾಂಡವ್ಯ ಈ ಅದ್ದೂರಿ ಚಿತ್ರವನ್ನು  ನಿರ್ದೇಶಿಸುತ್ತಿದ್ದಾರೆ.‌ ಉಪೇಂದ್ರ – ಮಂಜು ಮಾಂಡವ್ಯ ಕಾಂಬಿನೇಶನಲ್ಲಿ ಮೂಡಿಬರಲಿರುವ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. ನಿಮಿಷಾಂಬ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಣ್ಣಯ್ಯ ಚಂದ್ರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಅಣ್ಣಯ್ಯ, ಕರ್ಪುರದ ಗೊಂಬೆ, ಏನೋ ಒಂಥರ, ಬಿಂದಾಸ್, ರನ್ನ ದಂತಹ ಸೂಪರ್ ಹಿಟ್ ಚಿತ್ರಗಳನ್ನು  ಅಣ್ಣಯ್ಯ ಚಂದ್ರು ನಿರ್ಮಿಸಿದ್ದಾರೆ. ಉಪೇಂದ್ರ ಅವರಿಗೆ ಈ‌ ಚಿತ್ರದ  ಕಥೆ ಬಹಳ ಇಷ್ಟವಾಗಿದ್ದು ಮುಂದಿನ ಜನವರಿಯಿಂದಲೇ  ಚಿತ್ರ ಪ್ರಾರಂಭ ಮಾಡೋಣ ಎಂದಿದ್ದಾರಂತೆ. ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ, ನಂತರ ನಿರ್ದೇಶಕರಾಗೂ ಜನಪ್ರಿಯರಾದವರು. ಅವರೆ  ಈ ನೂತನ ಚಿತ್ರಕ್ಕೆ ಕಥೆ, ಚಿತ್ರಕಥೆ,  ಸಂಭಾಷಣೆ ಬರೆದಿದ್ದಾರೆ ಸದ್ಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ತಿಳಿಸುವುದಾಗಿ ಮಂಜು ಮಾಂಡವ್ಯ ತಿಳಿಸಿದ್ದಾರೆ.

CG ARUN

ಬೋಳು ತಲೆಯ ಚಿರು!

Previous article

ಎಲ್ಲರಿಗೂ ಆಪ್ತವಾಗುವ ʻಗಮನಂʼ ಐದು ಭಾಷೆಗಳಲ್ಲಿ ರೆಡಿ!

Next article

You may also like

Comments

Leave a reply

Your email address will not be published. Required fields are marked *

More in cbn