ಸ್ಯಾಂಡಲ್ ವುಡ್ ನಲ್ಲಿ ಮಿಸ್ಟರ್ ಐರಾವತನಾಗಿ ಹವಾ ಸೃಷ್ಟಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜತೆಯಾಗಿದ್ದ ಊರ್ವಶಿ ರೌಟೇಲಾ ಇತ್ತೀಚಿಗೆ ಬಾತ್ ಶವರ್ ಕೆಳಗೆ ಪಿಂಕ್ ಬಾಡಿ ಸೂಟ್ ನಲ್ಲಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು. ಸದ್ಯ ಬುರ್ಕಾದಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಇತ್ತೀಚಿಗೆ ಅಬುದಾಬಿಗೆ ಭೇಟಿ ನೀಡಿದ್ದ ಊರ್ವಶಿ ರೌಟೇಲಾ ಅಲ್ಲಿನ ಪ್ರಸಿದ್ಧ ಶೇಕ್ ಝಯೇದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿದ್ದಾರೆ. ಬುರ್ಕಾ ಧರಿಸಿ ತೆಗೆಸಿಕೊಂಡಿರುವ ಫೊಟೋ ಈಗ ಸಖತ್ ವೈರಲ್ ಆಗಿದೆ.
ಶೇಕ್ ಝಯೇದ್ನ ಸೌಂದರ್ಯ, ಅಲ್ಲಿನ ಆಪ್ಯಾಯ ವಾತಾವರಣಕ್ಕೆ ಬೆರಗಾಗಿರುವ ಊರ್ವಶಿ ರೌಟೇಲಾ ರಮಧಾನ್ಶುಭಾಶಯಗಳನ್ನು ತಿಳಿಸಿದ್ದಾರೆ. ಸದಾ ತಮ್ಮ ಕಾಸ್ಟ್ಯೂಮ್ಗಳಿಂದಲೇ ಮಾಧ್ಯಮಗಳ ಕ್ಯಾಮೆರಾ ಕಣ್ಣು ಸೆಳೆಯುವ ಊರ್ವಶಿ, ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಸ್ಟನ್ನಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಟೋನ್ಡ್ ಫಿಗರ್ ಬಾಲಿವುಡ್ ನಟಿಯರನ್ನೂ ದಂಗುಬಡಿಸಿದೆ. ಸದ್ಯ ಹಿಂದಿಯ ಪಾಗಲ್ಪಂಟಿ ಚಿತ್ರದ ಶೂಟಿಂಗ್ನಲ್ಲಿದ್ದಾರೆ ಊರ್ವಶಿ. ಲಂಡನ್ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಜಾನ್ ಅಬ್ರಹಾಂ ಜತೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕರಣ್ ವಾಹಿ ಜತೆ ಹೇಟ್ ಸ್ಟೋರಿ 4 ಚಿತ್ರದಲ್ಲಿ ನಟಿಸಿದ್ದರು.
No Comment! Be the first one.