ಬಹುಭಾಷಾ ನಟಿ ಊರ್ವಶಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಕಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ನಟ ಸೂರ್ಯ ಅಭಿನಯದ ಸಿನಿಮಾವೊಂದರಲ್ಲಿ ಊರ್ವಶಿ ಅಭಿನಯಿಸಲಿದ್ದಾರೆ. ಈಗಾಗಲೇ ಈಗಾಗಲೇ ಮೊದಲ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಕೆಲವು ಭಾಗದ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಉಳಿದ ಭಾಗದ ಶೂಟಿಂಗ್ ಗಾಗಿ ಊರ್ವಶಿ ಈ ತಂಡವನ್ನು ಸದ್ಯದಲ್ಲಿಯೇ ಸೇರಲಿದ್ಧಾರಂತೆ.
ಸುಧಾ ಕೊಂಗರಾ ಅವರು ನಿರ್ದೆಶನ ಮಾಡುತ್ತಿರುವ ಈ ಸಿನಿಮಾ ಕ್ಯಾಪ್ಟರ್ ಜಿ.ಆರ್. ಗೋಪಿನಾಥ್ ಅವರ ಜೀವನವನ್ನು ಆಧರಿಸಿದೆ. ಸೂರ್ಯ ಅವರೊಂದಿಗೆ ಅಪರ್ಣಾ, ಮೋಹನ್ ಬಾಬು, ಜಾಕಿ ಶ್ರಾಫ್, ಪರೇಶ್ ರಾವಲ್ ಕೂಡ ಅಭಿನಯಿಸುತ್ತಿದ್ದಾರೆ. ಉಳಿದಂತೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ, ನಿಕೇತ್ ಬೊಮ್ಮಿರೆಡ್ಡಿ ಛಾಯಾಗ್ರಹಣ ಚಿತ್ರಕ್ಕಿದೆ.