ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಅಂದ್ರೆ ಅಭಿಮಾನಿಗಳ ಪಾಲಿಗೆ ಹಬ್ಬ. ಅಭಿಮಾನಿಗಳೆಲ್ಲ ತಿಂಗಳ ಮುಂಚೆಯೇ ಇದಕ್ಕಾಗಿ ರೆಡಿಯಾಗುವುದು ಮಾಮೂಲಿ. ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಇತರರೂ ಕೂಡಾ ದರ್ಶನ್ ಅವರಿಗೆ ಅಚ್ಚರಿದಾಯಕ ಗಿಫ್ಟುಗಳನ್ನು ಕೊಡೋ ಪರಿಪಾಠವಿದೆ. ಈ ಸಲ ಅಂಥಾದ್ದೇ ಒಂದು ಗಿಫ್ಟ್ ನೀಡಲು ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ನಿರ್ಧರಿಸಿದ್ದಾರಂತೆ.
ಈ ವರೆಗೂ ದರ್ಶನ್ ಅವರ ಹಲವಾರು ಚಿತ್ರಗಳಿಗೆ ಹಿಟ್ ಸಾಂಗುಗಳನ್ನು ನೀಡಿರುವವರು ವಿ ನಾಗೇಂದ್ರ ಪ್ರಸಾದ್. ಈ ಮೂಲಕವೇ ದರ್ಶನ್ ಜೊತೆ ನಿಕಟ ಸ್ನೇಹವನ್ನೂ ಹೊಂದಿದ್ದಾರೆ. ಇದೀಗ ನಾಗೇಂದ್ರ ಪ್ರಸಾದ್ ಒಂದು ಅದ್ಭುತವಾದ ಹಾಡನ್ನು ದರ್ಶನ್ ಹುಟ್ಟುಹಬ್ಬದಂದು ಗಿಫ್ಟ್ ಆಗಿ ನೀಡಲು ತಯಾರಾಗಿದ್ದಾರೆ.
ಇದು ದರ್ಶನ್ ಮತ್ತು ಅಭಿಮಾನಿಗಳ ಪ್ರೀತಿಯನ್ನು ಸಾರುವಂತಿರುತ್ತದೆಯಂತೆ. ಈಗಾಗಲೇ ಈ ಹಾಡಿಗಾಗಿ ಸಂಪೂರ್ಣ ತಯಾರಿಯನ್ನೂ ನಾಗೇಂದ್ರ ಪ್ರಸಾದ್ ಮಾಡಿಕೊಂಡಿದ್ದಾರೆ. ಅವರೇ ಬರೆದಿರೋ ಈ ಗೀತೆಗೆ ಅವರೇ ಸಂಗೀತ ಸಂಯೋಜನೆ ಮಾಡಲಿದ್ದಾರಂತೆ. ಈ ಹಾಡು ದರ್ಶನ್ ಹುಟ್ಟುಹಬ್ಬವನ್ನು ನಿಜಕ್ಕೂ ಹಬ್ಬವಾಗಿಸೋದಂತೂ ಸತ್ಯ.
#
No Comment! Be the first one.