ಎಪ್ಪತ್ತು ದಿನಗಳ ಲಾಕ್‌ ಡೌನ್‌ ಕಾಲಾವಧಿಯಲ್ಲಿ ಬರೋಬ್ಬರಿ ಹದಿನಾರು ಸ್ಕ್ರಿಪ್ಟುಗಳನ್ನು ಬರೆದಿಟ್ಟುಕೊಂಡಿರುವ ಮಿಸ್ಕಿನ ಈಗ ಅವುಗಳಲ್ಲಿ ಮೂರು ಕಥೆಗಳನ್ನು ಸಿನಿಮಾವಾಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲಿ ಮೊದಲನೆಯ ಸಿನಿಮಾವನ್ನು ಇಷ್ಟರಲ್ಲೇ ಶುರು ಮಾಡಲಿದ್ದು, ಸಿಂಬು ಹೀರೋ ಆಗಿ ನಟಿಸಲಿದ್ದಾರೆ. ಇದೇ ಸಿನಿಮಾದಲ್ಲಿ ವಡಿವೇಲು ವಿಲನ್‌ ಆಗಿ ನಟಿಸಲು ಒಪ್ಪಿರೋದು.

 ತಮಿಳಿನ ವಿಕ್ಷಿಪ್ತ ನಿರ್ದೇಶಕ ಮಿಸ್ಕಿನ್.‌ ಬೇರೆಲ್ಲಾ ನಿರ್ದೇಶಕರು ಸಿನಿಮಾ ಮಾಡಲು ಸಾಧ್ಯವಿಲ್ಲ ಅಂತಾ ಪಕ್ಕಕ್ಕಿಟ್ಟ ವಸ್ತುಗಳನ್ನು ಕೈಗೆತ್ತಿಕೊಳ್ಳುವ, ಅದನ್ನು ಗೆಲ್ಲಿಸುವ ಕಸುಬುದಾರಿಕೆ ಮಿಸ್ಕಿನ್‌ಗೆ ಸಿದ್ದಿಸಿದೆ. ಸೈಕೋ ಸಬ್ಜೆಕ್ಟುಗಳು, ಕ್ರೈಂ, ಥ್ರಿಲ್ಲರ್‌ ಸಿನಿಮಾಗಳನ್ನು ಕಾಡುವಂತೆ ಕಟ್ಟಿಕೊಡಬಲ್ಲ ಮಿಸ್ಕಿನ್‌ ಉತ್ತಮ ನಟ ಕೂಡಾ ಹೌದು. ಈತ ನಿರ್ದೇಶಿಸಿದ ಚಿತ್ತಿರಂ ಪೇಸುದಡಿ, ಅಂಜಾದೆ, ನಂದಲಾಲಾ, ಯುದ್ಧಂ ಸೆಯ್‌, ಮುಗಮುಡಿ, ಪಿಸಾಸು, ತುಪಾರಿವಾಲನ್‌ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿವೆ. ಪಿಸಾಸು ಸಿನಿಮಾ ಕನ್ನಡದಲ್ಲೂ ಚೆಂದಗೆ ರಿಮೇಕ್‌ ಆಗಿತ್ತು.  ಸಾಮಾನ್ಯವಾಗಿ ಹಾರರ್‌ ಸಿನಿಮಾಗಳಲ್ಲಿನ ದೆವ್ವದ ಪಾತ್ರಗಳನ್ನು ನೋಡಿ ಜನ ಭಯಗೊಳ್ಳುತ್ತಾರೆ. ಆದರೆ, ಈ ಚಿತ್ರವನ್ನು ನೋಡಿದ ಪ್ರೇಕ್ಷಕ ದೆವ್ವವನ್ನೂ ಪ್ರೀತಿಸುವಂತಿತ್ತು!

-ಹೀಗೆ ನೋಡುಗರ ದೃಷ್ಟಿಕೋನವನ್ನು ಬದಲಿಸುವ ಕಲೆ ಮಿಸ್ಕಿನ್‌ರಂಥಾ ನಿರ್ದೇಶಕರಿಗೆ ಒಲಿದಿದೆ. ಕಾಮಿಡಿ ಹೀರೋಗಳಾದ ಕೆ. ಭಾಗ್ಯರಾಜ್‌, ಪಾಂಡ್ಯರಾಜನ್‌ರನ್ನು ತಮ್ಮ ಸಿನಿಮಾಗಳಲ್ಲಿ ವಿಲನ್‌ ಪಾತ್ರ ನೀಡಿ ಅಚ್ಛರಿ ಮೂಡಿಸಿದ್ದ ಮಿಸ್ಕಿನ್‌ ಈಗ ತಮಿಳಿನ ಮತ್ತೊಬ್ಬ ಜನಪ್ರಿಯ ಕಾಮಿಡಿ ನಟ ವಡಿವೇಲುವನ್ನೂ ಖಳನಾಯಕನಾಗಿ ಪರಿಚಯಿಸುತ್ತಿದ್ದಾರೆ.

ಎಪ್ಪತ್ತು ದಿನಗಳ ಲಾಕ್‌ ಡೌನ್‌ ಕಾಲಾವಧಿಯಲ್ಲಿ ಬರೋಬ್ಬರಿ ಹದಿನಾರು ಸ್ಕ್ರಿಪ್ಟುಗಳನ್ನು ಬರೆದಿಟ್ಟುಕೊಂಡಿರುವ ಮಿಸ್ಕಿನ ಈಗ ಅವುಗಳಲ್ಲಿ ಮೂರು ಕಥೆಗಳನ್ನು ಸಿನಿಮಾವಾಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲಿ ಮೊದಲನೆಯ ಸಿನಿಮಾವನ್ನು ಇಷ್ಟರಲ್ಲೇ ಶುರು ಮಾಡಲಿದ್ದು, ಸಿಂಬು ಹೀರೋ ಆಗಿ ನಟಿಸಲಿದ್ದಾರೆ. ಇದೇ ಸಿನಿಮಾದಲ್ಲಿ ವಡಿವೇಲು ವಿಲನ್‌ ಆಗಿ ನಟಿಸಲು ಒಪ್ಪಿರೋದು. ಭಾರತೀಯ ಚಿತ್ರರಂಗದ ಬಹುಮುಖ್ಯ ನಿರ್ದೇಶಕ ಮಿಸ್ಕಿನ್‌ ತನ್ನ ವಿಚಿತ್ರ, ವಿಲಕ್ಷಣ ಸಿನಿಮಾಗಳ ಮೂಲಕ ಸಾಕಷ್ಟು ಹೊಸತುಗಳನ್ನು ಸೃಷ್ಟಿಸಿದ್ದಾರೆ. ಈಗ ಆ ಲಿಸ್ಟಿಗೆ ಇವೆಲ್ಲಾ ಸೇರಿಕೊಳ್ಳುತ್ತಿವೆ….

CG ARUN

ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ

Previous article

ಮಾತಿಗೆ ತಪ್ಪಿತಾ ಅಕಾಡೆಮಿ?

Next article

You may also like

Comments

Leave a reply

Your email address will not be published. Required fields are marked *