ಅಜಿತ್, ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಬ್ಯೂಟಿಫುಲ್ ನಟ. ಲಕ್ಷಾಂತರ ಯುವಕರು ಇವರ ನಟನೆ, ವಾಕಿಂಗ್ ಸ್ಟೈಲ್, ಲುಕ್ ಮತ್ತು ಡೈಲಾಗ್ಗೆ ಫಿದಾ ಆಗಿದ್ದಾರೆ. ಇವರ ಹೊಸ ಸಿನಿಮಾ ‘ವಲಿಮೈ’ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸುತ್ತಲೇ ಇದೆ. ಕಳೆದ ಕೆಲ ತಿಂಗಳಿಂದಲೂ ಈ ಸಿನಿಮಾ ಅಪ್ಡೇಡ್ ಏನಾಗಿದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಕೊನೆ ಹಂತದ ಶೂಟಿಂಗ್ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಈ ಮಧ್ಯೆ ತಮಿಳುನಾಡಿನಲ್ಲಿ ಸಿಎಂ ಪಳನಿಸ್ವಾಮಿ ಜೊತೆ ಎಲೆಕ್ಷನ್ ಕ್ಯಾಂಪೇನ್ಗೆ ತೆರಳಿದ್ದಾಗ ಅಲ್ಲಿಯೂ ಕೂಡ ತಲಾ ಅಭಿಮಾನಿಗಳು ‘ವಲಿಮೈ’ ಸಿನಿಮಾದ ಅಪ್ಡೇಟ್ ಏನಾಯ್ತು ಅಂತ ಕೇಳಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಕೊನೆಗೂ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದ್ರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಬೋನಿ ಕಪೂರ್ ನಿರ್ಮಿಸಿದ ಮತ್ತು ಎಚ್. ವಿನೋದ್ ನಿರ್ದೇಶನದ ‘ವಲಿಮೈ’ ಚಿತ್ರದಲ್ಲಿ ಅಜಿತ್ ಮತ್ತು ಹುಮಾ ಖುರೇಷಿ ಪ್ರಮುಖ ಜೋಡಿಯಾಗಿ ನಟಿಸಿದರೆ, ಯೋಗಿ ಬಾಬು ಮತ್ತು ಕಾರ್ತಿಕೇಯ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಸಿನಿಮಾ ಮುಂದಿನ ಕೆಲವು ತಿಂಗಳುಗಳ ನಂತರ ತೆರೆಕಾಣಲಿದೆ ಅಂತ ತಿಳಿಸಿ, ಮುಂಬರುವ ಹಬ್ಬದ ದಿನವೇ ಚಿತ್ರ ಬಿಡುಗಡೆಯಾಗಲಿದೆ ಅಂತ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
No Comment! Be the first one.