ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಇದೀಗ ಬಾಲಿವುಡ್ ನಟಿಯೊಬ್ಬರಿಗೆ ಹೀಗೆ ವ್ಯಕ್ತಿಯೊಬ್ಬ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಇವರ ಹುಚ್ಚಾಟಕ್ಕೆ ನಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಹೌದು, ನಟಿ ವಾಣಿ ಕಪೂರ್ ಇತ್ತೀಚೆಗೆ ವರ್ಸೋವಾದಿಂದ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಸಮೀರ್ ಖಾನ್ ಎನ್ನುವ ವ್ಯಕ್ತಿಯೊಬ್ಬ ವರ್ಸೋವಾದಿಂದ ಬಾಂದ್ರಾವರೆಗೆ ತಮ್ಮ ಬೈಕ್ನಲ್ಲಿ ವಾಣಿಯವರ ಕಾರನ್ನೇ ಹಿಂಬಾಲಿಸಿದ್ದಾನೆ. ಈ ವೇಳೆ ಬೇಸತ್ತ ವಾಣಿ ಕಪೂರ್, ವರ್ಸೋವಾ ಪೊಲೀಸ್ ಠಾಣೆಗೆ ನೇರವಾಗಿ ಹೋಗಿ ದೂರು ದಾಖಲು ಮಾಡಿದ್ದಾರೆಂದು ವರದಿಗಳಾಗಿವೆ. ನಂತರ ಹುಡುಗನನ್ನು ಬಂದಿಸಿದ್ದಾರೆ ಪೊಲೀಸರು ಎನ್ನಲಾಗಿದೆ. ಇನ್ನೂ ನಟ – ನಟಿಯರನ್ನು ಹಿಂಬಾಲಿಸುವುದು ಇದೇ ಮೊದಲೇನಲ್ಲ. ಈಗಾಗಲೇ ಬಹಳಷ್ಟು ಪ್ರಕರಣಗಳು ನಡೆದಿವೆ. ಅಷ್ಟೇ ಅಲ್ಲ ಅನೇಕ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಇದೀಗ ವಾಣಿ ಕಪೂರ್ ಅವರ ಪ್ರಕರಣ ಕೂಡ ಒಂದು ಸೇರ್ಪಡೆಯಾಗಿದೆ.
No Comment! Be the first one.